"ಈ ಆಫರ್ ಅನ್ನು ತಕ್ಷಣವೇ ನಾನು ಮುಖಕ್ಕೆ ಹೊಡೆದಂತೆ ತಿರಸ್ಕರಿಸಿದೆ. ಮೊದಲಿಗೆ, ಆ ವ್ಯಕ್ತಿಗೆ ನನ್ನ ತಂದೆಯಷ್ಟು ವಯಸ್ಸಾಗಿದೆ. ಇಂತಹ ಆಫರ್ಗಳನ್ನು ನಾನು ಈ ಹಿಂದೆಯೂ ನೋಡಿದ್ದೇನೆ. ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಹೋದಾಗೆಲ್ಲ, ಪ್ರಭಾವಿ ವ್ಯಕ್ತಿಗಳನ್ನು ಆಗಾಗ್ಗೆ ಭೇಟಿಯಾಗುತ್ತೀನಿ. ಅವರಲ್ಲಿ ಹಲವರು ನನ್ನ ಫೋನ್ ನಂಬರ್ ಕೇಳುತ್ತಾರೆ. ಕೆಲವರು, ನನ್ನೊಂದಿಗೆ ದೂರವಾಣಿ ಸಂಪರ್ಕದಲ್ಲಿರಲು ಕೇಳಿದರೆ, ಇನ್ನೂ ಕೆಲವರು ಹೊರಗೆ ಸಿಗೋಣ ಎನ್ನುತ್ತಾರೆ" ಎಂದು ಆಮಿ ಹೇಳಿದ್ದಾರೆ.