ಕಾಮನ್‌ವೆಲ್ತ್ ಕ್ರೀಡಾಕೂಟದ ಬಳಿಕ ಭಾರತೀಯ ಕ್ರೀಡಾಪಟುಗಳು ಮಿಸ್ಟರ್ ಸಿಂಗ್ಸ್ ಇಂಡಿಯಾ-ದಿ ಹೋಮ್ ಆಫ್ ಕರಿ ಎಂಬ ರೆಸ್ಟೋರೆಂಟ್‌ಗೆ ತೆರಳಿದ್ದರು. ಈ ವೇಳೆ, ಸಿಬ್ಬಂದಿಗಳು ನೀಡಿದ್ದ ನ್ಯಾಪ್‌ಕಿನ್‌ನಲ್ಲಿ ಭಾರತದ ನಕ್ಷೆಯನ್ನು ನೋಡಿದ ಲೊವ್ಲಿನಾ, ಅದರಲ್ಲಿ ಈಶಾನ್ಯ ಭಾಗವೇ ಇಲ್ಲದಿರುವುದನ್ನು ಕಂಡು ಆಶ್ಚರ್ಯಕ್ಕೊಳಗಾದರು. ತಕ್ಷಣವೇ ಮಾಲೀಕರನ್ನು ಕರೆದು ಈಶಾನ್ಯ ಪ್ರದೇಶಗಳನ್ನು ಬಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.