ಡಾ. ಫಿಲಿಪ್ಸ್ ಅವರು ತಮ್ಮ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ವಿವರಿಸಿದಂತೆ, ಚೀನೀ ಮೂಲದ 'ಜಾಸ್ಮಿನ್ ಬ್ಲ್ಯಾಕ್ ಕಾಫಿ' ಎಂಬ ಇನ್‌ಸ್ಟಂಟ್ ಹರ್ಬಲ್ ಪೌಡರ್ ಪಾನೀಯವನ್ನು ದಿನಕ್ಕೆ 2-3 ಕಪ್‌ಗಳಂತೆ ಸೇವಿಸಿದ್ದು! ರೋಗಿಗೆ ಕಣ್ಣುಗಳು ಹಳದಿಯಾಗುವುದು, ಮೂತ್ರದ ಬಣ್ಣ ಕಂದು, ಕೈ-ಕಾಲುಗಳಲ್ಲಿ ತೀವ್ರ ತುರಿಕೆ ಮತ್ತು ಇತರ ಲಕ್ಷಣಗಳು ಕಂಡುಬಂದವು. ತನಿಖೆಯ ನಂತರ ತಿಳಿದದ್ದು – ರೋಗಿ ತನ್ನ ರೂಮ್‌ಮೇಟ್ ನೀಡಿದ ಚೀನೀ 'ಜಾಸ್ಮಿನ್ ಕಾಫಿ' ಬ್ರ್ಯಾಂಡ್ 'ಡಯಾನ್ ಎರ್ ವಾ'ಯನ್ನು ಸುಮಾರು ಒಂದು ತಿಂಗಳು ಸೇವಿಸುತ್ತಿದ್ದ ಎಂದು ಹೇಳಿದ್ದಾರೆ.