ನ್ಯೂಯಾರ್ಕ್​​ನ ಟೈಮ್ಸ್ ಸ್ಕ್ವೇರ್‌ನಲ್ಲಿ ಚಾಕು ದಾಳಿ; ಸಿಕ್ಕಸಿಕ್ಕವರಿಗೆ ಇರಿದ ಮಹಿಳೆ, ಪೊಲೀಸರ ಗುಂಡೇಟಿಗೆ ಬಲಿ..New York

Knife-wielding woman kills one in New York's Times Square
Knife-wielding woman kills one in New York's Times Square
Published on: 

ಪ್ರಮುಖ ಮುಖ್ಯಾಂಶಗಳು

  • 49 ವರ್ಷದ ಪಮೇಲಾ ಸಿಸ್ನೆರೋಸ್ ಎಂಬಾಕೆಯಿಂದ ಚಾಕುವಿನಿಂದ ದಾಳಿ
  • ಒಬ್ಬ ಮಹಿಳೆಗೆ ಗಂಭೀರ ಗಾಯ, ಮತ್ತೊಬ್ಬ ಮಹಿಳೆ ಸಾವು
  • ಪಮೇಲಾ ಸಿಸ್ನೆರೋಸ್ ಎಂಬಾಕೆಯನ್ನು ತಡೆಯಲು ವಿಫಲರಾದಾಗ ಗುಂಡಿನ ದಾಳಿ ನಡೆಸಿದ ಪೊಲೀಸರು
ವಾಷಿಂಗ್ಟನ್​ ಡಿಸಿ:  ಅಮೆರಿಕದ ಪ್ರಸಿದ್ಧ ನ್ಯೂಯಾರ್ಕ್​ ನಗರದ ಟೈಮ್​​ಸ್ಕ್ವೇರ್​​ನಲ್ಲಿ ಸೋಮವಾರ ಮದ್ಯಾಹ್ನ ನಡು ರಸ್ತೆಯಲ್ಲಿಯೇ ಮಹಿಳೆಯೊಬ್ಬರು ಚಾಕುವನ್ನಿಡಿದು ಇಬ್ಬರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಆಕೆಯನ್ನು ನಿಯಂತ್ರಿಸುವ ಭರದಲ್ಲಿ ಪೊಲೀಸರು ದಾಳಿ ನಡೆಸಿದ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. 

ದಾಳಿ ನಡೆಸಿದ ಮಹಿಳೆಗೆ ಗುಂಡೇಟು

ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆತಿಳಿಸಿರುವಂತೆ, 42ನೇ ರಸ್ತೆ ಮತ್ತು ಸವೆಂತ್​ ಅವೆನ್ಯೂ ಬಳಿ  ಈ ಘಟನೆ ನಡೆದಿದೆ. 49 ವರ್ಷದ ಪಮೇಲಾ ಸಿಸ್ನೆರೋಸ್ ಎಂಬಾಕೆಯೇ ದಾಳಿ ನಡೆಸಿದ್ದು, ಮಾನಸಿಕ ಅಸ್ವಸ್ಥರಿರಬಹುದು ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೇಲೆ ಚಾಕುವಿನಿಂದ ಇರಿದ ಆಕೆ ಉತ್ತರ ದಿಕ್ಕಿನ ಪೊಲೀಸ್​​ ಠಾಣೆಯತ್ತ  ಓಡಿ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನು ಪೊಲೀಸರು ತಡೆ ಹಿಡಿದ್ದಾರೆ. ಆಕೆಯ ಕೈನಲ್ಲಿ ಎರಡು ದೊಡ್ಡ ಚಾಕು ಇತ್ತು ಎನ್ನುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 
ಗುಂಡೇಟಿನಿಂದ ಗಾಯಗೊಂಡ ಪಮೇಲಾ ಸಿಸ್ನೆರೋಸ್ ಅನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಚಾಕು ಇರಿತಕ್ಕೊಳಗಾದ ಸಂತ್ರಸ್ತರ ಪೈಕಿ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ದೃಶ್ಯದಲ್ಲಿ ಏನಿದೆ?

ಮಹಿಳೆ ನಡು ರಸ್ತೆಯಲ್ಲಿಯೇ ದಾಳಿ ನಡೆಸಿದ ದೃಶ್ಯಗಳು   ಸಾರ್ವಜನಿಕ ಸ್ಥಳದಲ್ಲಿದ್ದವರ  ಮೊಬೈಲ್​ಗಳಲ್ಲಿ ರೆಕಾರ್ಡ್​ ಆಗಿದೆ. ಗುಲಾಬಿ ಬಣ್ಣದ  ಟೀ ಶರ್ಟ್​ ಧರಿಸಿದ್ದ ಆಕೆ ಎರಡು ದೊಡ್ಡ ಚಾಕು ಹಿಡಿದು ಹಲವರತ್ತ ನೋಡುತ್ತಿದ್ದಳು. ಆಕೆಯನ್ನು ತಡೆಯಲು ಬರುತ್ತಿದ್ದಾಗ ಎರಡು ಕೈಗಳನ್ನು ಜೋರಾಗಿ ಝಳಪಿಸುತ್ತಾ ಪೊಲೀಸರತ್ತ ಹೋದಳು. 

 ಕೊಲ್ಲುತ್ತೇನೆ ಎಂದು ಬೆದರಿಕೆ

ಅಧಿಕಾರಿಗಳು ಪದೇ ಪದೇ ಚಾಕುಗಳನ್ನು ಕೆಳಗಿಡುವಂತೆ ಎಚ್ಚರಿಕೆ ನೀಡಿದರೂ ಆಕೆ ಒಪ್ಪಲಿಲ್ಲ.  ಸುಮಾರು ನಾಲ್ಕು ನಿಮಿಷಗಳ ಕಾಲ ಪೊಲೀಸರು ಆಕೆಯೊಂದಿಗೆ ಮಾತುಕತೆ ನಡೆಸಿ ಶರಣಾಗುವಂತೆ ಕೋರಿದರು. ಆದರೆ ಆಕೆ ಅಧಿಕಾರಿಗಳ ಬಳಿ, ನಾನು ಏನನ್ನೂ ಕೆಳಗಿಡುವುದಿಲ್ಲ. ನಿಮ್ಮಿಬ್ಬರನ್ನೂ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.  ಆಕೆಯನ್ನು ತಡೆಯಲು ಪೊಲೀಸರು ಟೇಸರ್‌ಗಳನ್ನು ಬಳಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಟೇಸರ್‌ಗಳನ್ನು ತೆಗೆದುಹಾಕಿದ ಆಕೆ, ಚಾಕುಗಳನ್ನು ಬೀಸುತ್ತಾ ಪೊಲೀಸರ ಮೇಲೆಯೇ ಮುನ್ನುಗ್ಗಲು ಯತ್ನಿಸಿದ್ದಾಳೆ. ಅಂತಿಮವಾಗಿ 

ಎಷ್ಟೇ ಯತ್ನಿಸಿದರೂ ಆಕೆಯನ್ನು ತಡೆಯಲು ಸಾಧ್ಯವಾಗದೇ ಇದ್ದಾಗ ಆಕೆಯ  ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹರಸಿದ್ದಾರೆ. ತುಂಬಾ ಹೊತ್ತುಗಳ ಕಾಲ ರಸ್ತೆಯಲ್ಲಿಯೇ ಆಕೆಯನ್ನು ಇರಿಸಿಕೊಡಿರುವುದು ದೃಶ್ಯದಲ್ಲಿದೆ. ಇತ್ತ ಪೊಲೀಸರು ಶೂಟ್​ ಮಾಡುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. 

ನ್ಯೂಯಾರ್ಕ್ ಸಿಟಿ ಪೊಲೀಸರು ಹೇಳಿದ್ದು ಹೀಗೆ

 49 ವರ್ಷದ ಪಮೇಲಾ ಸಿಸ್ನೆರೋಸ್ ಎಂಬ ಮಹಿಳೆ 32 ವರ್ಷದ ಮಹಿಳೆ ಹಾಗೂ 68 ವರ್ಷದ ಮಹಿಳೆ ಮೇಲೆ ಏಕಾಏಕಿ ಮನಬಂದಂತೆ ಚಾಕುವಿನಿಂದ ಇರಿದಿದ್ದಾಳೆ.  ಈ ಅನಿರೀಕ್ಷಿತ ದಾಳಿಯಲ್ಲಿ ಹೊಟ್ಟೆಗೆ ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಾಯಾಳು ಪುರುಷನ ಹೊಟ್ಟೆಗೂ ಇರಿಯಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

ಮಹಿಳೆಯ ಚಾಕು ದಾಳಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲ. ಆರೋಪಿ ಮಹಿಳೆ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಂತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಮೇಯರ್ ಜೊಹ್ರಾನ್ ಮಮ್ದಾನಿ  ಮಾತನಾಡಿ, ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ತಡೆದ NYPD ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net