ಮುಜರಬಾನಿ ಈ ನಿರ್ಧಾರ ಎಲ್ಲರನ್ನು ಅಚ್ಚರಿಗೊಳಿಸಿದ್ದು, ಪಾಕಿಸ್ತಾನ್ ಸೂಪರ್ ಲೀಗ್ (PSL) ನಲ್ಲಿ ಆಡಲು ಮುಜರಬಾನಿ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಕೆಕೆಆರ್ ತಂಡದಿಂದ ಬಂದ ಐಪಿಎಲ್‌ನಲ್ಲಿ ಆಡುವ ಸುವರ್ಣ ಅವಕಾಶವನ್ನು ಕಳೆದುಕೊಳ್ಳಲು ಬಯಸದ ಮುಜರಬಾನಿ, ಪಿಎಸ್ಎಲ್ ಒಪ್ಪಂದವನ್ನು ಅರ್ಧಕ್ಕೇ ಕೈಬಿಟ್ಟು ಐಪಿಎಲ್‌ಗೆ ಹಾರಲು ಸಜ್ಜಾಗಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ಮಂಡಳಿಯೂ ಕೂಡ ಮುಜರಬಾನಿ ಐಪಿಎಲ್ ಪಯಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಗಳು ತಿಳಿಸಿವೆ.