ಟಿ20 ವಿಶ್ವಕಪ್‌ಗೆ ಕಿವೀಸ್ ಪಡೆ ಪ್ರಕಟ; ಸ್ಪಿನ್ ಮಂತ್ರ ಜಪಿಸಿ ಬಲಿಷ್ಠ ತಂಡ ಕಟ್ಟಿದ ಬ್ಲ್ಯಾಕ್‌ಕ್ಯಾಪ್ಸ್ | Kiwis squad

ಟಿ20 ವಿಶ್ವಕಪ್‌ಗೆ ಕಿವೀಸ್ ಪಡೆ ಪ್ರಕಟ; ಸ್ಪಿನ್ ಮಂತ್ರ ಜಪಿಸಿ ಬಲಿಷ್ಠ ತಂಡ ಕಟ್ಟಿದ ಬ್ಲ್ಯಾಕ್‌ಕ್ಯಾಪ್ಸ್
ಟಿ20 ವಿಶ್ವಕಪ್‌ಗೆ ಕಿವೀಸ್ ಪಡೆ ಪ್ರಕಟ; ಸ್ಪಿನ್ ಮಂತ್ರ ಜಪಿಸಿ ಬಲಿಷ್ಠ ತಂಡ ಕಟ್ಟಿದ ಬ್ಲ್ಯಾಕ್‌ಕ್ಯಾಪ್ಸ್
Published on
ನವದೆಹಲಿ: ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭವಾಗಲಿರುವ ಐಸಿಸಿ ಪುರುಷರ T20 ವಿಶ್ವಕಪ್​ಗಾಗಿ ನ್ಯೂಜಿಲೆಂಡ್(Kiwis squad) ಕ್ರಿಕೆಟ್ (NZC) ತನ್ನ 15 ಸದಸ್ಯರ ತಂಡವನ್ನು ಬುಧವಾರ (ಜ.7) ಅಧಿಕೃತವಾಗಿ ಘೋಷಿಸಿತು.

ಕಿವೀಸ್​ ಕಾಡುತ್ತಿದೆ ಗಾಯದ ಸಮಸ್ಯೆ

ಕೀವಿಸ್ ತಂಡದ ಘೋಷಣೆಯು ಗಾಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಅಲ್ಲದೆ, ಸ್ಯಾಂಟ್ನರ್, ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಫರ್ಗುಸನ್ ಮತ್ತು ಹೆನ್ರಿ ಸೇರಿ ಪ್ರಮುಖ ಆಟಗಾರರು ಪ್ರಸ್ತುತ ವಿವಿಧ ಕಾಯಿಲೆಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅದರೆ, ಫೆಬ್ರವರಿ 8 ರಂದು ನಡೆಯುವ ಆರಂಭಿಕ ಪಂದ್ಯದ ಮೊದಲು ಎಲ್ಲರೂ ಫಿಟ್ ಆಗುತ್ತಾರೆ ಎಂದು ಮುಖ್ಯ ತರಬೇತುದಾರ ರಾಬ್ ವಾಲ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ತಂಡದಲ್ಲಿ ನೂತನವಾಗಿ ಆಯ್ಕೆಯಾಗಿರುವ ಜಾಕೋಬ್ ಡಫಿ , ಅವರು ತಮ್ಮ ಮೊದಲ T20 ವಿಶ್ವಕಪ್‌ಗೆ ಆಡಲಿದ್ದಾರೆ. ಅಲ್ಲದೆ, ಡಫಿ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, 81 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳಿಗಾಗಿ ಸರ್ ರಿಚರ್ಡ್ ಹ್ಯಾಡ್ಲೀ ಅವರ 40 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ಫರ್ಗುಸನ್ ಮತ್ತು ಹೆನ್ರಿಗೆ ಪಿತೃತ್ವ ರಜೆ

ಸ್ಟಾರ್ ವೇಗಿ ಲಾಕಿ ಫರ್ಗುಸನ್ ಮತ್ತು ಮ್ಯಾಟ್ ಹೆನ್ರಿಗೆ ಪಿತೃತ್ವ ರಜೆ ನೀಡಲಾಗಿದೆ ಎಂದು NZC ದೃಢಪಡಿಸಿತು.
ಈ ತಂಡದಲ್ಲಿ ಬ್ಯಾಕಪ್ ಆಗಿ ರಿಸರ್ವ್ ವೇಗಿ ಕೈಲ್ ಜೇಮಿಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಯಾವುದೇ ಬೌಲರ್ ಬಯೋ-ಬಬಲ್‌ನಿಂದ ಹೊರಬಂದರೆ ಮುಖ್ಯ ತಂಡಕ್ಕೆ ಕಾಲಿಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಸ್ಯಾಂಟ್ನರ್ ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ

ಉಪಖಂಡದ ಪಿಚ್​ಗಳು ಸ್ಪಿನ್ ಸ್ನೇಹಿ ಪರಿಸ್ಥಿತಿಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿರುವುದರಿಂದ, ಮಿಚೆಲ್ ಸ್ಯಾಂಟ್ನರ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈ ಟ್ರ್ಯಾಕ್‌ಗಳನ್ನು ಬಳಸಿಕೊಳ್ಳಲು ತಂಡವು ಬಲಿಷ್ಠ ಸ್ಪಿನ್ ವಿಭಾಗವನ್ನು ಹೊಂದಿದೆ.
ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ ವೆಲ್ಲಿಂಗ್ಟನ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಟಿಮ್ ಸೀಫರ್ಟ್, ಇಶ್ ಸೋಧಿ | ಟ್ರಾವೆಲಿಂಗ್ ಮೀಸಲು: ಕೈಲ್ ಜೇಮಿಸನ್,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net