ಜಪಾನ್ ಕೋಸ್ಟ್ ಗಾರ್ಡ್ ಮಾಹಿತಿ ನೀಡಿರುವಂತೆ, ಪತ್ತೆಯಾದ ಎರಡೂ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಈಗಾಗಲೇ ಸಮುದ್ರದಲ್ಲಿ ಪತನಗೊಂಡಿವೆ. ಜಪಾನಿನ ಸುದ್ದಿ ಸಂಸ್ಥೆ ಜಿಜಿ ಪ್ರೆಸ್ ಪ್ರಕಾರ, ಈ ಕ್ಷಿಪಣಿಗಳು ಜಪಾನ್‌ನ ವಿಶೇಷ ಆರ್ಥಿಕ ವಲಯದ (EEZ) ಹೊರಭಾಗದಲ್ಲಿ ಬಿದ್ದಿರುವುದರಿಂದ ಸದ್ಯಕ್ಕೆ ಯಾವುದೇ ದೊಡ್ಡ ಹಾನಿಯ ವರದಿಯಾಗಿಲ್ಲ. ಆದರೂ, ಕಿಮ್ ಜಾಂಗ್-ಉನ್ ನೇತೃತ್ವದ ಸರ್ಕಾರದ ಈ ಹಠಾತ್ ನಡೆ ಜಪಾನ್ ಮತ್ತು ದಕ್ಷಿಣ ಕೊರಿಯಾವನ್ನು ಕೆರಳಿಸಿದೆ.