ಟಾರ್ಗೆಟ್ ಫಿಕ್ಸ್ ಮಾಡಿದ ಕಿಮ್! ಹೊರಬಂತು ಡೇಂಜರಸ್ ವಿಡಿಯೋ! ಮುಂದಿನ ಉತ್ತರಾಧಿಕಾರಿ ಇವಳೇ ಎಂದು ಸಾರಿದರಾ ಸರ್ವಾಧಿಕಾರಿ? Kim Jong Un

ಟಾರ್ಗೆಟ್ ಫಿಕ್ಸ್ ಮಾಡಿದ ಕಿಮ್! ಹೊರಬಂತು ಡೇಂಜರಸ್ ವಿಡಿಯೋ! ಮುಂದಿನ ಉತ್ತರಾಧಿಕಾರಿ ಇವಳೇ ಎಂದು ಸಾರಿದರಾ ಸರ್ವಾಧಿಕಾರಿ?
ಟಾರ್ಗೆಟ್ ಫಿಕ್ಸ್ ಮಾಡಿದ ಕಿಮ್! ಹೊರಬಂತು ಡೇಂಜರಸ್ ವಿಡಿಯೋ! ಮುಂದಿನ ಉತ್ತರಾಧಿಕಾರಿ ಇವಳೇ ಎಂದು ಸಾರಿದರಾ ಸರ್ವಾಧಿಕಾರಿ?
Published on
ಪಯೋಂಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್(Kim Jong Un) ಅವರ ಪ್ರತಿ ನಡೆಯೂ ಜಗತ್ತಿಗೆ ಒಂದು ಒಗಟು. ಆದರೆ ಇತ್ತೀಚೆಗೆ ಮಾರ್ಚ್ 11 ರಂದು ಪ್ರಮುಖ ಶಸ್ತ್ರಾಸ್ತ್ರ ಕಾರ್ಖಾನೆಗೆ ನೀಡಿದ ಭೇಟಿ ಮತ್ತು ಅಲ್ಲಿ ನಡೆದ ಘಟನೆಗಳು ಕೇವಲ ಒಂದು ಭೇಟಿಯಾಗಿ ಉಳಿದಿಲ್ಲ, ಇದು ಆ ದೇಶದ ಮುಂದಿನ ರಾಜಕೀಯ ದಿಕ್ಸೂಚಿಯಂತೆ ಕಾಣುತ್ತಿದೆ. ಕಿಮ್ ಜೊಂಗ್ ಉನ್ ಅವರ ಜೊತೆಗೆ ಅವರ ಪುತ್ರಿ ಕಿಮ್ ಜು ಏ ಕೂಡ ಕಾಣಿಸಿಕೊಂಡಿದ್ದು, ಕೈಯಲ್ಲಿ ಪಿಸ್ತೂಲು ಹಿಡಿದು ಗುರಿ ಇಟ್ಟಿರುವ ಫೋಟೋಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿವೆ.

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕಿಮ್ ಮತ್ತು ಪುತ್ರಿಯ ಶೂಟಿಂಗ್ ಡ್ರಿಲ್

ಉತ್ತರ ಕೊರಿಯಾದ ಅಧಿಕೃತ ಮಾಧ್ಯಮವಾದ ಕೆಸಿಎನ್‌ಎ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕಿಮ್ ಜೊಂಗ್ ಉನ್ ಅವರು ಹೊಸ ಮಾದರಿಯ ಪಿಸ್ತೂಲುಗಳ ಉತ್ಪಾದನೆಯನ್ನು ಪರಿಶೀಲಿಸಲು ಈ ಭೇಟಿ ನೀಡಿದ್ದರು. 2025ರ ಫೆಬ್ರವರಿ 19 ರಂದು ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಕೇಂದ್ರ ಮಿಲಿಟರಿ ಸಮಿತಿಯಿಂದ ಅನುಮೋದನೆ ಪಡೆದ ಈ ಹೊಸ ಶಸ್ತ್ರಾಸ್ತ್ರಗಳ ಗುಣಮಟ್ಟವನ್ನು ಸ್ವತಃ ಕಿಮ್ ಪರೀಕ್ಷಿಸಿದ್ದಾರೆ.
ಆದರೆ ಎಲ್ಲರ ಗಮನ ಸೆಳೆದದ್ದು ಕಿಮ್ ಅವರ ಪುತ್ರಿ ಕಿಮ್ ಜು ಏ. ಕಪ್ಪು ಚರ್ಮದ ಜಾಕೆಟ್ ಧರಿಸಿದ್ದ ತಂದೆ-ಮಗಳ ಜೋಡಿ ಕಾರ್ಖಾನೆಯ ಶೂಟಿಂಗ್ ರೇಂಜ್‌ನಲ್ಲಿ ಬಂದೂಕು ಚಲಾಯಿಸುವ ತಾಲೀಮಿನಲ್ಲಿ ಭಾಗವಹಿಸಿದ್ದರು. ಬಿಡುಗಡೆಯಾದ ಚಿತ್ರಗಳಲ್ಲಿ, ಜು ಏ ಒಂದು ಕಣ್ಣನ್ನು ಮುಚ್ಚಿ ಪಿಸ್ತೂಲಿನಿಂದ ಗುರಿ ಇಟ್ಟಿರುವ ದೃಶ್ಯವಿದ್ದು, ಪಿಸ್ತೂಲಿನ ನಳಿಕೆಯಿಂದ ಬೆಂಕಿ ಚಿಮ್ಮುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.

ಅಧಿಕಾರದ ಸಂಕೇತ 'ಲೆದರ್ ಜಾಕೆಟ್' ಮತ್ತು ಸೇನಾ ತರಬೇತಿ

ಉತ್ತರ ಕೊರಿಯಾದಲ್ಲಿ ಕಪ್ಪು ಚರ್ಮದ ಜಾಕೆಟ್ ಎನ್ನುವುದು ಕೇವಲ ಫ್ಯಾಷನ್ ಅಲ್ಲ, ಅದು ಸರ್ವೋಚ್ಚ ಅಧಿಕಾರ ಮತ್ತು ನಾಯಕತ್ವದ ಸಂಕೇತವಾಗಿದೆ. ಕಿಮ್ ಮತ್ತು ಅವರ ಪುತ್ರಿ ಇಬ್ಬರೂ ಒಂದೇ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿರುವುದು, ಜು ಏ ಅವರಿಗೆ ದೇಶದ ಶಕ್ತಿಶಾಲಿ ಮಿಲಿಟರಿ ಪರಂಪರೆಯನ್ನು ಧಾರೆ ಎರೆಯಲಾಗುತ್ತಿದೆ ಎಂಬ ಸಂದೇಶವನ್ನು ನೀಡುತ್ತಿದೆ.
ಸೇನೆ, ಸಾರ್ವಜನಿಕ ಭದ್ರತಾ ಪಡೆ ಮತ್ತು ಮಿಲಿಟರಿ ಪಡೆಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ ಕಾರ್ಖಾನೆಯು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಕಿಮ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಮತ್ತು ಆಧುನೀಕರಣಗೊಳಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಉತ್ತರಾಧಿಕಾರದ ಚರ್ಚೆಗೆ ಪುಷ್ಟಿ: ಯಾರು ಈ ಕಿಮ್ ಜು ಏ?

ಕಳೆದ ಕೆಲವು ತಿಂಗಳುಗಳಿಂದ ಕಿಮ್ ಜೊಂಗ್ ಉನ್ ಅವರು ಪ್ರತಿಯೊಂದು ಪ್ರಮುಖ ಕಾರ್ಯಕ್ರಮಗಳಲ್ಲಿ ತಮ್ಮ ಪುತ್ರಿಯನ್ನು ಮುಂಚೂಣಿಯಲ್ಲಿ ನಿಲ್ಲಿಸುತ್ತಿದ್ದಾರೆ. ಕಳೆದ ತಿಂಗಳು ನಡೆದ ವರ್ಕರ್ಸ್ ಪಾರ್ಟಿಯ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲೂ ಈಕೆ ಪ್ರಮುಖವಾಗಿ ಕಾಣಿಸಿಕೊಂಡಿದ್ದರು.
ವಿಶ್ಲೇಷಕರ ಪ್ರಕಾರ, ಕಿಮ್ ಕುಟುಂಬದ ಪೇಕ್ಟು ರಕ್ತಸಂಬಂಧ ಎಂಬ ಸಿದ್ಧಾಂತವನ್ನು ಎತ್ತಿ ಹಿಡಿಯಲು ಈ ಪ್ರಯತ್ನಗಳು ನಡೆಯುತ್ತಿವೆ. ದಶಕಗಳಿಂದ ಕಿಮ್ ಕುಟುಂಬವೇ ಉತ್ತರ ಕೊರಿಯಾವನ್ನು ಆಳುತ್ತಿದ್ದು, ಜು ಏ ಅವರಿಗೆ ಮಿಲಿಟರಿ ಶಿಕ್ಷಣ ಮತ್ತು ಶಸ್ತ್ರಾಸ್ತ್ರಗಳ ಜ್ಞಾನ ನೀಡುವ ಮೂಲಕ, ಆಕೆಯನ್ನು ಭವಿಷ್ಯದ ಬಲಿಷ್ಠ ನಾಯಕಿಯಾಗಿ ಬಿಂಬಿಸಲಾಗುತ್ತಿದೆ. ಪುತ್ರಿ ಶಸ್ತ್ರಾಸ್ತ್ರ ಹಿಡಿದು ನಿಂತಿರುವ ಚಿತ್ರಗಳು ಆಕೆಯ ಮಿಲಿಟರಿ ಅರ್ಹತೆಯನ್ನು ಸಾಬೀತುಪಡಿಸುವ ತಂತ್ರದ ಭಾಗವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ವಲಯದಲ್ಲಿ ಆತಂಕ

ಒಂದೆಡೆ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಪರೀಕ್ಷೆಗಳಿಂದ ಜಗತ್ತನ್ನು ಬೆಚ್ಚಿಬೀಳಿಸುತ್ತಿದ್ದರೆ, ಇನ್ನೊಂದೆಡೆ ಸಣ್ಣ ವಯಸ್ಸಿನ ಪುತ್ರಿಗೆ ಮಾರಕಾಸ್ತ್ರಗಳ ತರಬೇತಿ ನೀಡುತ್ತಿರುವುದು ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಿಮ್ ಜೊಂಗ್ ಉನ್ ನಂತರ ಅಧಿಕಾರ ಯಾರ ಕೈಗೆ ಹೋಗಬಹುದು ಎಂಬ ಪ್ರಶ್ನೆಗೆ ಜು ಏ ಅವರ ಈ ಸತತ ಭೇಟಿಗಳು ಉತ್ತರ ನೀಡುವಂತಿದೆ.
ಉತ್ತರ ಕೊರಿಯಾದ ರಾಜಕೀಯ ಇತಿಹಾಸದಲ್ಲಿ ಮಹಿಳೆಯೊಬ್ಬರು ಇಷ್ಟು ಬೇಗ ಸಾರ್ವಜನಿಕವಾಗಿ ಇಷ್ಟೊಂದು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು. ಇದು ಕೇವಲ ಶೂಟಿಂಗ್ ಡ್ರಿಲ್ ಅಲ್ಲ, ಬದಲಿಗೆ ಇಡೀ ವಿಶ್ವಕ್ಕೇ ಕಿಮ್ ನೀಡುತ್ತಿರುವ ಮುಂದಿನ ನಾಯಕಿ ಸಿದ್ಧವಾಗುತ್ತಿದ್ದಾರೆ ಎಂಬ ಎಚ್ಚರಿಕೆಯ ಸಂದೇಶವೂ ಹೌದು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net