ಹಲವು ವರ್ಷಗಳ ಅನಾರೋಗ್ಯ ಮತ್ತು ಜೈಲುವಾಸದ ಹೊರತಾಗಿಯೂ, ಖಲೀದಾ ಜಿಯಾ ಅವರು ನವೆಂಬರ್‌ನಲ್ಲಿ, 2026ರ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪ್ರಚಾರ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ತಿಂಗಳ ಆರಂಭದಲ್ಲಿ ಜಿಯಾ ಅವರನ್ನು ವಿಶೇಷ ಏರ್ ಆಂಬ್ಯುಲೆನ್ಸ್‌ನಲ್ಲಿ ಲಂಡನ್‌ಗೆ ಕರೆದೊಯ್ಯುವ ಯೋಜನೆಗಳಿದ್ದವು ಆದರೆ, ಅವರ ಸ್ಥಿತಿ ಸಾಕಷ್ಟು ಸ್ಥಿರವಾಗಿರಲಿಲ್ಲ. ಹೀಗಾಗಿ ಆ ಯೋಜನೆಯನ್ನು ಕೈಬಿಡಲಾಯಿತು. ಅಂದಹಾಗೆ, ಖಲೀದಾ ಅವರ ಮಗ ತಾರಿಕ್ ರೆಹಮಾನ್, 17 ವರ್ಷಗಳ ಸ್ವಯಂ-ದೇಶಭ್ರಷ್ಟತೆಯ ನಂತರ ಕಳೆದ ವಾರ ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೂಲಕ ಬಿಎನ್‌ಪಿ ಪಕ್ಷವನ್ನು ರೆಹಮಾನ್ ಮುನ್ನಡೆಸಲಿದ್ದಾರೆ. ಈ ಚುನಾವಣೆಯಲ್ಲಿ ಅವರ ಪಕ್ಷವು ಬಹುಮತ ಗಳಿಸಿದರೆ ಅವರನ್ನು ಪ್ರಧಾನಿ ಮಾಡುವ ನಿರೀಕ್ಷೆಯಿದೆ, (ಏಜೆನ್ಸೀಸ್).