ಕಾಶ್ಮೀರ ಯಾವತ್ತಿದ್ದರೂ ಅದು ಪಾಕಿಸ್ತಾನದ ಸೊತ್ತು, ಕಾಶ್ಮೀರ ಖಂಡಿತವಾಗಿ ಪಾಕಿಸ್ತಾನದ ಭಾಗವಾಗಲಿದೆ ಎಂದು ಶೆಹಬಾಜ್ ಷರೀಫ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಶ್ಮೀರದ ಮೇಲೆ ಪಾಕಿಸ್ತಾನಕ್ಕೆ ಹಕ್ಕಿದೆ ಎಂದ ಷರೀಫ್, ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ, ಕಾಶ್ಮೀರ ಪಾಕಿಸ್ತಾನದ ರಕ್ತನಾಳ ಎಂದು ಬಣ್ಣಿಸಿದ್ದರೆಂದು ನೆನಪಿಸಿಕೊಂಡರು. ಪಾಕಿಸ್ತಾನವು ಈ ಪ್ರದೇಶದಲ್ಲಿ ಶಾಂತಿಯನ್ನು ಬಯಸುತ್ತದೆ, ಆದರೆ ಈ ಶಾಂತಿಯನ್ನು ಸಮಾನತೆ ಮತ್ತು ನ್ಯಾಯದ ಆಧಾರದ ಮೇಲೆ ಸ್ಥಾಪಿಸಬೇಕೆನ್ನುವುದು ನಮ್ಮ ನಿಲುವಾಗಿದೆ ಎಂದು ಅವರು ಹೇಳಿದರು.