ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕತಾರ್ ರಾಷ್ಟ್ರದ ಭಾರತೀಯ ರಾಯಭಾರಿ ಘನತೆವೆತ್ತ ವಿಪುಲ್, ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಸಂದೀಪ್ ಕುಮಾರ್ ಹಾಗೂ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಉಪಸ್ಥಿತರಿದ್ದರು. ಇವರೊಂದಿಗೆ ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಅಧ್ಯಕ್ಷ ಎ.ಪಿ. ಮಣಿಕಂಠನ್, ಖತಾರ್ ಆಟೋ ಮ್ಯೂಸಿಯಂ ಆಡಳಿತ ವಿಭಾಗದ ಉಪ ನಿರ್ದೇಶಕಿ ಮಿಸ್ ಫಾತಿಮಾ ಅಲ್ ಮಾದೀದ್ ಹಾಗೂ ಹಿರಿಯ ಪೆಟ್ರೋಲಿಯಂ ಇಂಜಿನಿಯರ್ ಖಾಲಿದ್ ಅಲ್ ಫಕ್ರೂ ಉಪಸ್ಥಿತರಿದ್ದು, ಗೌರವ ಸಲ್ಲಿಸಿದರು.