ಪ್ರತಿಯೊಂದು ಕನ್ನಡ ಕೂಟವೂ ವಿಶಿಷ್ಟ ಹೆಸರುಗಳೊಂದಿಗೆ ಗಮನ ಸೆಳೆಯುತ್ತವೆಯಲ್ಲದೆ ಸಕ್ರಿಯವಾಗಿ ಕನ್ನಡ ತಾಯಿಯ ಸೇವೆಯನ್ನು ಮಾಡುತ್ತಿವೆ. ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ ‘ಕಾವೇರಿ’ ಕನ್ನಡ ಸಂಘ, ಮಿಚಿಗನ್ ರಾಜ್ಯದಲ್ಲಿ ‘ಪಂಪ’ ಕನ್ನಡ ಕೂಟ, ಗ್ರೇಟರ್ ಲ್ಯಾನ್ಸಿಂಗ್ ಕನ್ನಡ ಸಂಘ, ಮಿನ್ನೆಸೋಟ ರಾಜ್ಯದಲ್ಲಿ ‘ಸಂಗೀತ’ ಕನ್ನಡ ಕೂಟ, ಮಿಸ್ಸೋರಿ ರಾಜ್ಯದಲ್ಲಿ ‘ಸಂಗಮ’ ಕನ್ನಡ ಕೂಟ, ನ್ಯೂಯಾರ್ಕ್ ಸಿಟಿಯ ಕನ್ನಡ ಕೂಟ 50ನೇ ವರ್ಷದ ಮತ್ತು ನ್ಯೂಜೆರ್ಸಿಯ ‘ಬೃಂದಾವನ’ ಕನ್ನಡ ಕೂಟ 20ನೇ ವರ್ಷದ ಸಂಭ್ರಮವನ್ನು ಆಚರಿಸಿವೆ. ಸಿಯಾಟಲ್ನ ‘ಸಹ್ಯಾದ್ರಿ’ ಕನ್ನಡ ಸಂಘ, ಕ್ಲೀವ್ಲ್ಯಾಂಡಿನ ‘ಕಸ್ತೂರಿ’ ಕನ್ನಡ ಸಂಘ, ಸಿನ್ಸಿನಾಟಿಯ ‘ಸಿಂಚನ’ ಕನ್ನಡ ಬಳಗ, ಫಿಲಡೆಲ್ಪಿಯಾದ ‘ನವೋದಯ’ ಕನ್ನಡ ಸಂಘ, ಟೆಕ್ಸಾಸ್ನ ‘ಕುವೆಂಪು’ ಕನ್ನಡ ಸಂಘ ನಿರಂತರವಾಗಿ ಕನ್ನಡ ಸೇವೆ ಮಾಡುತ್ತಿವೆ.