ಕೇವಲ 90 ಮೀಟರ್ ಹಳಿ, 60 ಸೆಕೆಂಡ್ ಪ್ರಯಾಣ! ಇದು ವಿಶ್ವದ ಅತ್ಯಂತ ಚಿಕ್ಕ ರೈಲ್ವೆ.. | Angels Flight

Angels Flight
Angels Flight
Published on

ಲಾಸ್ ಏಂಜಲೀಸ್: ನೀವು ರೈಲು ಹತ್ತಿ ಕುಳಿತುಕೊಳ್ಳುವಷ್ಟರಲ್ಲಿನಿಮ್ಮ ನಿಲ್ದಾಣ ಬಂದೇ ಬಿಟ್ಟರೆ ಹೇಗಿರುತ್ತದೆ? ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂತಹದ್ದೊಂದುಅಚ್ಚರಿಯ ರೈಲು ಮಾರ್ಗವಿದೆ. ಕೇವಲ 90 ಮೀಟರ್ (ಸುಮಾರು 315 ಅಡಿ) ಉದ್ದವಿರುವ ಈ ರೈಲ್ವೆಯನ್ನು 'ಏಂಜಲ್ಸ್ಫ್ಲೈಟ್' (Angels Flight) ಎಂದು ಕರೆಯಲಾಗುತ್ತದೆ.

ಏನಿದರ ವಿಶೇಷತೆ?

ಇದು ನಾವು ದಿನನಿತ್ಯನೋಡುವ ಸಾಮಾನ್ಯ ರೈಲಲ್ಲ, ಇದೊಂದು 'ಫ್ಯೂನಿಕ್ಯುಲರ್' (Funicular) ರೈಲು. ಅಂದರೆ ಕಡಿದಾದ ಗುಡ್ಡಅಥವಾ ಇಳಿಜಾರಿನಲ್ಲಿ ಕೇಬಲ್ ಸಹಾಯದಿಂದ ಚಲಿಸುವ ವಿಶೇಷ ವ್ಯವಸ್ಥೆ.

ಪ್ರಯಾಣದಅವಧಿ: ಈ ರೈಲಿನಲ್ಲಿ ಪ್ರಯಾಣಕೇವಲ ಒಂದು ನಿಮಿಷ ಮಾತ್ರ!

ಇಳಿಜಾರು: ಇದರ ಹಳಿಗಳನ್ನು 33 ಡಿಗ್ರಿಯಷ್ಟು ಕಡಿದಾದಇಳಿಜಾರಿನಲ್ಲಿ ನಿರ್ಮಿಸಲಾಗಿದೆ.

ಬೋಗಿಗಳು: ಇದರಲ್ಲಿ 'ಆಲಿವೆಟ್' ಮತ್ತು 'ಸಿನೈ' ಎಂಬಎರಡು ಬೋಗಿಗಳಿವೆ. ಒಂದು ಬೋಗಿ ಮೇಲೆ ಹೋದರೆ, ಮತ್ತೊಂದು ಕೆಳಕ್ಕೆ ಚಲಿಸುತ್ತದೆ.

ಇತಿಹಾಸ ಮತ್ತುಮಹತ್ವ

1901 ರಲ್ಲಿಕರ್ನಲ್ ಜೆ.ಡಬ್ಲ್ಯೂ. ಎಡ್ಡಿ ಎಂಬುವವರು ಇದನ್ನು ಸ್ಥಾಪಿಸಿದರು. ಇವರು ವೃತ್ತಿಯಲ್ಲಿ ವಕೀಲರಾಗಿದ್ದರೂ,ಎಂಜಿನಿಯರಿಂಗ್‌ನಲ್ಲಿ ಅದ್ಭುತ ಜ್ಞಾನ ಹೊಂದಿದ್ದರು. ವಿಶೇಷವೆಂದರೆ ಇವರು ಅಮೆರಿಕದ ಮಾಜಿ ಅಧ್ಯಕ್ಷಅಬ್ರಹಾಂ ಲಿಂಕನ್ ಅವರ ಆಪ್ತ ಸ್ನೇಹಿತರಾಗಿದ್ದರು. 1969 ರವರೆಗೆ ಲಕ್ಷಾಂತರ ಜನರನ್ನು ಹೊತ್ತೊಯ್ದಈ ರೈಲು ನಗರದ ಹೆಗ್ಗುರುತಾಗಿತ್ತು. 2001 ರಲ್ಲಿ ಸಂಭವಿಸಿದ ದುರದೃಷ್ಟಕರ ಅಪಘಾತದಿಂದಾಗಿ ಇದನ್ನುಮುಚ್ಚಲಾಗಿತ್ತು.ನಂತರ ಸುರಕ್ಷತಾ ಕ್ರಮಗಳನ್ನು ಕೈಗೊಂಡು 2010 ರಲ್ಲಿ ಮತ್ತೆ ಸಾರ್ವಜನಿಕರ ಬಳಕೆಗೆಮುಕ್ತಗೊಳಿಸಲಾಯಿತು.

ಪ್ರಯಾಣ ದರ(ಜೂನ್ 2025 ರ ಅನ್ವಯ)

ಪ್ರಸ್ತುತ ಇದರಒಂದು ಕಡೆಯ ಪ್ರಯಾಣಕ್ಕೆ $1.50 ಹಾಗೂ ಹೋಗಿ ಬರಲು (Round Trip) $3 ದರ ನಿಗದಿಪಡಿಸಲಾಗಿದೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net