​ಅಂತಿಮ ಪಂದ್ಯ ಸೋಲು: ಜಾನ್ ಸೀನಾ WWE ವೃತ್ತಿಜೀವನಕ್ಕೆ ತೆರೆ.. ಐತಿಹಾಸಿಕ ದಿಗ್ಗಜನಿಗೆ ಟ್ಯಾಪೌಟ್ ವಿದಾಯ!

John Cena
John Cena
Published on

ಪ್ರಮುಖ ಮುಖ್ಯಾಂಶಗಳು

  • WWE ಇತಿಹಾಸದಲ್ಲಿ ತನ್ನ ಆದ ವಿಶಿಷ್ಟ ವಿಭಿನ್ನವಾಗಿ ಗಮನ ಸೆಳೆದ ಸೂಪರ್​​ಸ್ಟಾರ್
  • ಡಬ್ಲ್ಯೂಡಬ್ಲ್ಯೂಇ ವೃತ್ತಿಜೀವನಕ್ಕೆ ತೆರೆ ಎಳೆದ ಲೆಜೆಂಡ್ ​ಜಾನ್ ಸೀನಾ
  • ಈ ಮುಂಚೆನೇ 2025 ಅಂತಿಮ ವರ್ಷ ಎಂದು ಘೋಷಿಸಿದ್ದ ಜಾನ್ ಸೀನಾ
ಅಮೆರಿಕ: WWE ಇತಿಹಾಸದಲ್ಲಿ ತನ್ನ ಆದ ವಿಶಿಷ್ಟ ವಿಭಿನ್ನವಾಗಿ ಗಮನ ಸೆಳೆದ ಸೂಪರ್​​ಸ್ಟಾರ್, ಲೆಜೆಂಡ್ ​ಜಾನ್ ಸೀನಾ ಇದೀಗ ತಮ್ಮ 23 ವರ್ಷಗಳ (2002ರಿಂದ 2025ರವರೆಗೆ) ಡಬ್ಲ್ಯೂಡಬ್ಲ್ಯೂಇ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಹೌದು, ವಾಷಿಂಗ್ಟನ್ ಡಿ.ಸಿ.ಯ ಕ್ಯಾಪಿಟಲ್ ವನ್ ಅರೆನಾದಲ್ಲಿ ಭಾನುವಾರ ನಡೆದ WWE Saturday Night's Main Eventನಲ್ಲಿ ಜಾನ್ ಸೀನಾ ಅವರ ಅಂತಿಮ ಮ್ಯಾಚ್ ನಡೆಯಿತು. ಅವರು ಗುಂಥರ್ (Gunther) ವಿರುದ್ಧ ಸೋತರು. ಈ ಮೂಲಕ ತಮ್ಮ ವೃತ್ತಿ ಜೀವನ ಕೊನೆಗೊಂಡಿತು.
ಸೀನಾ ಅವರು ಸ್ಲೀಪರ್ ಹೋಲ್ಡ್‌ನಲ್ಲಿ ಟ್ಯಾಪ್ ಔಟ್ ಮಾಡಿ ಸಮರ್ಪಣೆ ಮಾಡಿದರು. ಇದು ಸೀನಾ ಅವರ ಕೆರಿಯರ್‌ನಲ್ಲಿ 20 ವರ್ಷಗಳ ನಂತರ ಮೊದಲ ಟ್ಯಾಪ್ ಔಟ್ ಸೋಲು ಎಂದು ಹೇಳಲಾಗುತ್ತಿದೆ.
ಮ್ಯಾಚ್ ನಂತರ ಭಾವುಕ ಕ್ಷಣಗಳು
ಸೀನಾ ರಿಂಗ್ ಮಧ್ಯದಲ್ಲಿ ಕುಳಿತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನೆರದಿದ್ದ ಅಪಾರ ಅಭಿಮಾನಿಗಳು ಥಾಂಕ್ಯೂ ಸೀನಾ ಘೋಷಣೆಗಳು ಮೊಳಗಿದವು. 
ಸೀನಾ ಅವರು 2024ರಲ್ಲಿ Money in the Bank ಈವೆಂಟ್‌ನಲ್ಲಿ 2025 ಅಂತಿಮ ವರ್ಷ ಎಂದು ಘೋಷಿಸಿದ್ದರು. ಈ ವರ್ಷದ ರಿಟೈರ್‌ಮೆಂಟ್ ಟೂರ್‌ನಲ್ಲಿ ಅವರು Cody Rhodes ವಿರುದ್ಧ WrestleMania 41ರಲ್ಲಿ 17ನೇ ಬಾರಿಗೆ ವರ್ಲ್ಡ್ ಚಾಂಪಿಯನ್ ಆಗಿದ್ದರು. ಆದರೆ, ಬಳಿಕ ಸೋತರು. ಅವರು ಇಂಟರ್‌ಕಾಂಟಿನೆಂಟಲ್ ಚಾಂಪಿಯನ್‌ಶಿಪ್ ಗೆದ್ದು ಕೆರಿಯರ್ ಗ್ರ್ಯಾಂಡ್ ಸ್ಲ್ಯಾಮ್ ಪೂರ್ಣಗೊಳಿಸಿದರು. 
ಸೀನಾ ಅವರು ರಿಂಗ್‌ನಿಂದ ನಿವೃತ್ತಿ ಹೊಂದಿದ್ದರೂ, WWEಯೊಂದಿಗೆ 5 ವರ್ಷಗಳ ಅಂಬಾಸಿಡರ್ ಒಪ್ಪಂದ ಹೊಂದಿದ್ದು, ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಮ್ಯಾಚ್‌ಗಳಲ್ಲಿ ಅಲ್ಲ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net