ಎನ್‌ವಿಡಿಯಾ ಸಿಇಒ ಆಗಿ ಮತ್ತೆ ಮರಳಲು ಜೆನ್ಸೆನ್ ಹುವಾಂಗ್ ಸಿದ್ಧತೆ: ಅತ್ಯಾಪ್ತ ವಲಯದಲ್ಲಿ ಚರ್ಚೆ | Jensen Huang

ಮೂರು ವಿವಾಹೇತರ ಸಂಬಂಧ ಮತ್ತು ಅದರಲ್ಲೊಬ್ಬರು ಚೀನಾ ಸ್ಪೈ ಎಂಬ ವಿವಾದದ ಬಳಿಕ ಎನ್ವಿಡಿಯಾ ಸಿಒಇ ಹುದ್ದೆಗೆ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್ ಅವರು, ಮತ್ತೆ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಸಿದ್ದತೆ ನಡೆಸಿದ್ದು, ಈ ಬಗ್ಗೆ ತಮ್ಮ ಅತ್ಯಾಪ್ತ ವಲಯದಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ.
ಎನ್‌ವಿಡಿಯಾ ಸಿಇಒ ಆಗಿ ಮತ್ತೆ ಮರಳಲು ಜೆನ್ಸೆನ್ ಹುವಾಂಗ್ ಸಿದ್ಧತೆ: ಅತ್ಯಾಪ್ತ ವಲಯದಲ್ಲಿ ಚರ್ಚೆ | Jensen Huang
GREG DOHERTY
Published on: 

ವಾಷಿಂಗ್ಟನ್: ಮೂರು ವಿವಾಹೇತರ ಸಂಬಂಧ ಮತ್ತು ಅದರಲ್ಲೊಬ್ಬರು ಚೀನಾ ಸ್ಪೈ ಎಂಬ ವಿವಾದದ ಬಳಿಕ ಎನ್ವಿಡಿಯಾ ಸಿಒಇ ಹುದ್ದೆಗೆ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್ ಅವರು, ಮತ್ತೆ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಸಿದ್ದತೆ ನಡೆಸಿದ್ದು, ಈ ಬಗ್ಗೆ ತಮ್ಮ ಅತ್ಯಾಪ್ತ ವಲಯದಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ.

ಹುವಾಂಗ್ ಅವರ ಆಪ್ತರೊಬ್ಬರು ಫೈನಾನ್ಸಿಯಲ್ ಟೈಮ್ಸ್​ ನೀಡಿದ ಮಾಹಿತಿ ಪ್ರಕಾರ, ಹುವಾಂಗ್ ಅವರ ಮರುನೇಮಕಕ್ಕಾಗಿ ಸಿಲಿಕಾನ್ ವ್ಯಾಲಿಯ ಕೆಲ ಪ್ರಮುಖ ಕಾರ್ಯನಿರ್ವಾಹಕರನ್ನು ಒಳಗೊಂಡ ವಿಶೇಷ ವಾರ್ ರೂಮ್ ಒಂದನ್ನು ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ, ಇದಕ್ಕೆ ಶ್ವೇತಭವನದಿಂದಲೂ ಬೆಂಬಲವನ್ನು ಗಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಫ್ರಾಂಟಿಯರ್ ಲ್ಯಾಬ್‌ಗಳನ್ನು ಹೊರತುಪಡಿಸಿ, ತಂತ್ರಜ್ಞಾನ ಲೋಕದಲ್ಲಿರುವ ಪ್ರಮುಖರೆಲ್ಲರೂ ಜೆನ್ಸೆನ್ ಅವರನ್ನು ಇಷ್ಟಪಡುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿದ್ದು, ಈ ಎಲ್ಲಾ ಪ್ರಯತ್ನಗಳಿಗೆ ಹುವಾಂಗ್ ಅವರ ಸಂಪೂರ್ಣ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

Also Read
ಎಸ್​ಪಿ ಸಂಸದೆ ಪ್ರಿಯಾ ಸರೋಜ್-ರಿಂಕು ಸಿಂಗ್ ಮದುವೆ: ಕುಟುಂಬ ಸಮೇತ ಪ್ರಧಾನಿ ಮೋದಿ ಭೇಟಿಯಾಗಿ ಆಹ್ವಾನ ನೀಡಿದ ಕ್ರಿಕೆಟರ್ | Rinku Singh
ಎನ್‌ವಿಡಿಯಾ ಸಿಇಒ ಆಗಿ ಮತ್ತೆ ಮರಳಲು ಜೆನ್ಸೆನ್ ಹುವಾಂಗ್ ಸಿದ್ಧತೆ: ಅತ್ಯಾಪ್ತ ವಲಯದಲ್ಲಿ ಚರ್ಚೆ | Jensen Huang

ಜೆನ್ಸನ್ ಹುವಾಂಗ್ ಅವರ ಸಂಭಾವ್ಯ ಉತ್ತರಾಧಿಕಾರಿಯನ್ನು ಹುಡುಕುವಲ್ಲಿ ಎನ್ವಿಡಿಯಾ ಮಂಡಳಿಯು ಬ್ರಿಟಿಷ್ ಚಿಪ್ ತಯಾರಕ ಆರ್ಮ್ ಹೋಲ್ಡಿಂಗ್ಸ್ ಸಿಇಒ ರೆನೆ ಹಾಸ್ ಅವರನ್ನು ಸಂಪರ್ಕಿಸಿದೆ ಎಂದು ಈ ಹಿಂದೆ ಎಫ್​ಟಿ ವರದಿ ಮಾಡಿದ ಕೆಲವು ದಿನಗಳ ಬಳಿಕ ಈ ಮಾಹಿತಿ ಹೊರ ಬಂದಿದೆ. ವಾರಾಂತ್ಯದ ರಜಾ ದಿನವಾದ ಹಿನ್ನೆಲೆ ಎನ್ವಿಡಿಯಾ ಕಂಪನಿಯು ತಕ್ಷಣಕ್ಕೆ ಈ ವರದಿಗಳ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೂರು ವಿವಾಹೇತರ ಸಂಬಂಧಗಳು ಬಹಿರಂಗಗೊಂಡ ಬಳಿಕ ಮತ್ತು ಅದರಲ್ಲೊಬ್ಬರು ಚೀನಾ ಸ್ಪೈ ಎಂಬ ವಿವಾದ ಹಿನ್ನೆಲೆ ಕಳೆದ ವಾರ ಹುವಾಂಗ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದು ಕಂಪನಿಯ ಅತ್ಯಾಧುನಿಕ ಎಐ (AI) ಚಿಪ್‌ಗಳನ್ನು ಚೀನಾಕ್ಕೆ ರಫ್ತು ಮಾಡುವ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಗರಣವು ಚಿಪ್ ತಯಾರಕ ಕಂಪನಿಯನ್ನು ಬಿಕ್ಕಟ್ಟಿಗೆ ತಳ್ಳಿದ್ದು, ಸ್ವತಃ ಹುವಾಂಗ್ ಅವರೇ ಆರ್ಥಿಕವಾಗಿ ಬೆಂಬಲಿಸಿದ್ದ ಎಐ ಉದ್ಯಮದಾದ್ಯಂತ ಆಘಾತವನ್ನು ಉಂಟುಮಾಡಿದೆ (ಏಜೆನ್ಸೀಸ್).