ಜಗತ್ತಿನ ಶ್ರೀಮಂತ ಸಿಇಓಗಳನ್ನು ಹಿಂದಿಕ್ಕಿದ ಕರ್ನಾಟಕದ ಜಯಶ್ರೀ ಉಳ್ಳಾಲ್ | Jayashree Ullal

Jayashree Ullal
Jayashree Ullal
Published on
ಲಂಡನ್: ಜಾಗತಿಕ ಶ್ರೀಮಂತ ಮತ್ತು ಹೆಸರಾಂತ ಭಾರತೀಯ ಮೂಲದ ಸಿಇಓಗಳ ಬಗ್ಗೆ ನಿಮಗೆ ಪರಿಚಯವಿದೇಯೇ? ಎಂದು ಕೇಳಿದರೆ, ಬಹಳಷ್ಟು ಜನ ಹೇಳುವ ಎರಡೂ ಪ್ರಮುಖ ಹೆಸರುಗಳೆಂದರೆ ಸತ್ಯ ನಾಡೆಲ್ಲಾ ಮತ್ತು ಸುಂದರ್ ಪಿಚೈ. ಆದರೆ ಇವರಿಬ್ಬರನ್ನು ಹಿಂದಿಕ್ಕಿ ಪ್ರಸ್ತುತ ಶ್ರೀಮಂತ ಸಿಇಓ ಸ್ಥಾನವನ್ನು ಕರ್ನಾಟಕ ಮೂಲದ ಜಯಶ್ರೀ ಉಳ್ಳಾಲ್ (Jayashree Ullal) ಪಡೆದುಕೊಂಡಿದ್ದಾರೆ.
ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2025 ರ ಪ್ರಕಾರ, ಈ ಹೆಗ್ಗಳಿಕೆಗೆ ಅರಿಸ್ಟಾ ನೆಟ್‌ವರ್ಕ್ಸ್‌ನ ಅಧ್ಯಕ್ಷೆ ಮತ್ತು ಸಿಇಒ ಜಯಶ್ರೀ ಉಳ್ಳಾಲ್ ಪಾತ್ರರಾಗಿದ್ದಾರೆ. ಮಾಹಿತಿಯ ಪ್ರಕಾರ ಜಯಶ್ರೀ ಉಳ್ಳಾಲ್ ಅವರ ನಿವ್ವಳ ಮೌಲ್ಯ 50,170 ಕೋಟಿ ರೂ.ಗಳಾಗಿದ್ದು, ಅವರನ್ನು ಅತ್ಯಂತ ಶ್ರೀಮಂತ ಭಾರತೀಯ ಮೂಲದ ವ್ಯವಸ್ಥಾಪಕರನ್ನಾಗಿ ಗುರುತಿಸಲಾಗಿದೆ. 9,770 ಕೋಟಿ ರೂ.ಗಳೊಂದಿಗೆ ಮೈಕ್ರೋಸಾಫ್ಟ್ ಸಿಇಒ ನಾಡೆಲ್ಲಾ ಎರಡನೇ ಸ್ಥಾನದಲ್ಲಿದ್ದರೆ, ಗೂಗಲ್‌ನ ಸುಂದರ್ ಪಿಚೈ 5,810 ಕೋಟಿ ರೂ.ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.
ಜಯಶ್ರೀ ಉಳ್ಳಾಲ್ ಹಿನ್ನಲೆ
ಮಂಗಳೂರಿನ ಜಿಎಸ್‌ಬಿ ಸ್ಮಾರ್ತ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜಯಶ್ರೀ ಉಳ್ಳಾಲ್ ಮಾರ್ಚ್ 27, 1961 ರಂದು ಲಂಡನ್‌ನಲ್ಲಿ ಭಾರತೀಯ ಮೂಲದ ಹಿಂದೂ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಸುದರ್ಜನ್​ ಭಾರತ ಶಿಕ್ಷಣ ಸಚಿವಾಲಯದೊಂದಿಗೆ ಕೆಲಸ ಮಾಡುತ್ತಿದ್ದರು.
ಜಯಶ್ರೀ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಉಲ್ಲಾಳ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದರು. ನಂತರ ಅವರು 1986 ರಲ್ಲಿ ಸಾಂತಾ ಕ್ಲಾರಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ, 2025 ರಲ್ಲಿ ಎಂಜಿನಿಯರಿಂಗ್‌ನಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ್ದಿದ್ದಾರೆ.

ಜಯಶ್ರೀ ಉಳ್ಳಾಲ್ ಅವರ ನಿವ್ವಳ ಮೌಲ್ಯ

ಫೋರ್ಬ್ಸ್ ವರದಿಯ ಪ್ರಕಾರ, ಡಿಸೆಂಬರ್ 28, 2025 ರ ಹೊತ್ತಿಗೆ ಉಳ್ಳಾಲ್ ಅವರ ನಿವ್ವಳ ಮೌಲ್ಯ 5.7 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅವರು ಪ್ರಸ್ತುತ ನಿವ್ವಳ ಮೌಲ್ಯದಲ್ಲಿ ಜಾಗತಿಕವಾಗಿ 713 ನೇ ಸ್ಥಾನದಲ್ಲಿದ್ದಾರೆ ಮತ್ತು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲಾದ ಅರಿಸ್ಟಾ ನೆಟ್‌ವರ್ಕ್ಸ್‌ನ ಸುಮಾರು 3% ಷೇರುಗಳನ್ನು ಹೊಂದಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net