ಟ್ರಂಪ್ ಶಾಂತಿ ಮಂತ್ರದ ನಡುವೆಯೇ ಇಸ್ರೇಲ್ ಅಬ್ಬರ: ಲೆಬನಾನ್‌ನ ಇಡೀ ಹಳ್ಳಿಗಳೇ ಭಸ್ಮ; ಒಂದೇ ದಿನ 2,000 ಜನರ ಸಾವು! Israel Attack Lebanon

ಲೆಬನಾನ್​ ಮೇಲೆ ಇಸ್ರೇಲ್​ ಮತ್ತೆ ದಾಳಿ
ಲೆಬನಾನ್​ ಮೇಲೆ ಇಸ್ರೇಲ್​ ಮತ್ತೆ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಯುದ್ಧದಲ್ಲಿ ಕದನ ವಿರಾಮ ಘೋಷಣೆ
  • ಲೆಬನಾನ್​ ಮೇಲೆ ಇಸ್ರೇಲ್​ ದಾಲಿ
  • ಸುಮಾರು 2,000 ಜನ ಸಾವನ್ನಪ್ಪಿರುವ ಶಂಕೆ
ಲೆಬನಾನ್​: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಾತ್ಕಾಲಿಕವಗಿ ನಿಲ್ಲಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ 14 ದಿನಗಳ ಕದನ ವಿರಾಮ ಘೋಷಿಸಿದ್ದರೆ, ಇತ್ತ ಇಸ್ರೇಲ್​ ಲೆಬನಾನ್ (Israel Attack Lebanon)​ ಮೇಲೆ ದಾಳಿ ಮಾಡಿ ಒಂದೀಡಿ ಹಳ್ಳಿಯನ್ನೇ ಸುಟ್ಟು ಭಸ್ಮ ಮಾಡಿದೆ.
ವರದಿಗಳ ಪ್ರಕಾರ, ಇಸ್ರೇಲ್​ ದಕ್ಷಿಣ ಲೆಬನಾನ್‌ನಲ್ಲಿರುವ ತೈಬೆಹ್, ನಕೌರಾ ಮತ್ತು ಡೀರ್ ಸೆರಿಯನ್ ಹಳ್ಳಿಗಳನ್ನು ಗುರಿಯಾಗಿಸಿ ವ್ಯವಸ್ಥಿತ ದಾಳಿ ಮಾಡಿ ಸಂಪೂರ್ಣ ನಾಶ ಮಾಡಿದೆ ಎಂದು ಹೇಳಲಾಗುತ್ತಿದೆ.

ಊರಿಗೆ ಊರನ್ನೇ ನಾಶ ಮಾಡಿದ ಇಸ್ರೇಲ್!

ಗಾಜಾದ ರಫಾ ಮತ್ತು ಬೀಟ್ ಹನೌನ್‌ನಲ್ಲಿ ಬಳಸಿದ ವಿಧಾನದ ಮಾದರಿಯಲ್ಲಿ ಗಡಿ ಗ್ರಾಮಗಳಲ್ಲಿನ ಎಲ್ಲಾ ಮನೆಗಳನ್ನು ನಾಶಮಾಡಲು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸಾರ್ವಜನಿಕ ಕರೆ ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ ಎಂದು ಪಾಶ್ಚಾತ್ಯ ಮಧ್ಯಮಗಳು ವರದಿ ಮಾಡಿವೆ. ಈ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾವಿರಾರು ಜನ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಇಸ್ರೇಲ್​ ಮೇಲೆ ಹಿಜ್ಬೊಲ್ಲಾ ನಡೆಸಿದ ದಾಳಿಗೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಶನಿವಾರ (ಏ.11) ಹಿಜ್ಬೊಲ್ಲಾದ ದಾಳಿಗೆ 18 ಜನ ಇಸ್ರೇಲಿಗರು ಸಾವನ್ನಪ್ಪಿದ್ದರೆ, ಇಂದು (ಏ.12) ಇಸ್ರೇಲ್​ ನಡೆಸಿದ ದಾಳಿಯಲ್ಲಿ ಕನಿಷ್ಟ 2,000 ಜನ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಆದರೆ ಈ ದಾಳಿಯ ಕುರಿತು ಲೆಬನಾನ್​ ಸರ್ಕಾರವಾಗಲೀ ಅಥವಾ ಇಸ್ರೇಲ್​ ಸರ್ಕಾರವಾಗಲೀ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ, ಇದು ಸದ್ಯಕ್ಕೆ ಮಾಧ್ಯಮ ವರದಿಯಾಗಿದೆ ಎಂದು ಹೇಳಲಾಗುತ್ತಿದೆ.

ಮುರಿದು ಬಿದ್ದ ಶಾಂತಿ ಒಪ್ಪಂದ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್​ಗೆ ಅಮೆರಿಕ ಮತ್ತು ಇರಾನಿನ ಶಾಂತಿ ನಿಯೋಗ ಆಗಮಿಸಿತ್ತು. ಉಭಯ ದೇಶಗಳ ನಡುವೆ ಸುಮಾರು 21 ಗಂಟೆಗಳವರೆಗೆ ಮಾತುಕತೆ ನಡೆದಿದೆ. ಆದರೆ ಇರಾನಿನ ಯಾವುದೇ ಷರತ್ತುಗಳನ್ನು ಒಪ್ಪಿಕೊಳ್ಳಲು ಅಮೆರಿಕ ಸಿದ್ಧವಿರದ ಕಾರಣ ಈ ಮಾತುಕತೆ ವಿಫಲವಾಗಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.

ಇರಾನಿನ ಷರತ್ತುಗಳೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕದನ ವಿರಾಮ ಘೋಷಿಸಿದ ಬೆನ್ನಲೆ, ಇರಾನ್​ ಶಾಂತಿ ಸ್ಥಾಪನೆಯಾಗ ಬೇಕಾದರೆ ತನ್ನ 10 ಷರತ್ತುಗಳನ್ನು ಮುಂದಿಟ್ಟಿತು. ಯುದ್ಧ ಪರಿಹಾರ ನೀಡಬೇಕು, ಪರಮಾಣು ಶಕ್ತಿ ಹೊಂದಲು ತಡೆಯಬಾರು, ಲೆಬನಾನ್​ ಮೇಲೆ ದಾಳಿ ಮಾಡಬಾರದು, ಹೊರ್ಮುಜ್​ ಮೇಲೆ ತನ್ನದೆ ಹಿಡಿತವಿರಬೇಕು ಹೀಗೆ ಹತ್ತು ಷರತ್ತುಗಳನ್ನು ಇರಾನ್​ ವಿಧಿಸಿತ್ತು. ಆದರೆ ಈ ಷರತ್ತುಗಳೆಗೆ ಅಮೆರಿಕ ಕ್ಯಾರೆ ಅನ್ನದ ಕಾರಣ ಈಗ ಮಾತುಕತೆ ವಿಫಲವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net