ಗಾಜಾ ಮೇಲೆ ಇಸ್ರೇಲ್​ ಗುಂಡಿನ ದಾಳಿ; ನಾಲ್ವರು ಬಲಿ, 18 ಮಂದಿಗೆ ಗಾಯ | Israel

ಖಾನ್ ಯೂನಿಸ್‌ನಲ್ಲಿ ಇಸ್ರೇಲ್(Israel) ನಡೆಸಿದ ವೈಮಾನಿಕ ದಾಳಿ
ಖಾನ್ ಯೂನಿಸ್‌ನಲ್ಲಿ ಇಸ್ರೇಲ್(Israel) ನಡೆಸಿದ ವೈಮಾನಿಕ ದಾಳಿ
Published on
ಗಾಜಾ: ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿ ಇಸ್ರೇಲ್(Israel) ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, 18 ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಗುರುವಾರ (ನ.20) ತಿಳಿಸಿದ್ದಾರೆ. ಅಲ್ಲದೆ, ಹಮಾಸ್ ಮತ್ತು ಇಸ್ರೇಲ್ ಅಮೆರಿಕ ಮಧ್ಯಸ್ಥಿಕೆಯ ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಪರಸ್ಪರ ಆರೋಪಿಸಿಕೊಂಡಿವೆ.
ಖಾನ್ ಯೂನಿಸ್‌ನ ಪೂರ್ವದಲ್ಲಿರುವ ಬನಿ ಸುಹೈಲಾ ಪಟ್ಟಣದ ಮನೆಯ ಮೇಲೆ ನಡೆದ ದಾಳಿಯಲ್ಲಿ ಒಂದು ಹೆಣ್ಣು ಮಗು ಸೇರಿದಂತೆ ಮೂವರು ಸಾವನ್ನಪ್ಪಿ, 15 ಜನರು ಗಾಯಗೊಂಡಿದ್ದಾರೆ. ಆದರೆ ಇನ್ನೊಂದು ಹತ್ತಿರದ ಅಬಾಸ್ಸನ್ ಪಟ್ಟಣದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರು ಮತ್ತು ಮೂವರು ಗಾಯಗೊಂಡರು ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪಿನ ಸದಸ್ಯರು ತನ್ನ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ, ಇಸ್ರೇಲ್ ಎನ್ಕ್ಲೇವ್‌ನಾದ್ಯಂತ ಗುರಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿತು. ಇದರಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ವೈದ್ಯರು ಹೇಳಿದೆ.
ಹಮಾಸ್ ಈ ದಾಳಿಗಳನ್ನು ಅಪಾಯಕಾರಿ ಉಲ್ಬಣ ಎಂದು ಕರೆದಿದ್ದು, ಅರಬ್ ಮಧ್ಯವರ್ತಿಗಳು, ಟರ್ಕಿ ಮತ್ತು ಅಮೆರಿಕ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದೆ.

ಕದನ ವಿರಾಮ ಉಲ್ಲಂಘನೆ ಆರೋಪ

ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮವನ್ನು ಧಿಕ್ಕರಿಸಿ ಇಸ್ರೇಲ್ ಗಾಜಾದ ಮೇಲೆ 393 ದಾಳಿಗಳನ್ನು ನಡೆಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಈ ದಾಳಿಯಲ್ಲಿ ಸುಮಾರು 280 ಜನರು ಸಾವನ್ನಪ್ಪಿದ್ದು, ಸುಮಾರು 672 ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಈ ಅಂಕಿಅಂಶಗಳು ಯುದ್ಧಕ್ಕೆ ಶಾಶ್ವತವಾದ ನಿಲುಗಡೆಯಾಗಿ ಕಾರ್ಯನಿರ್ವಹಿಸುವ ಬದಲು ಮಿಲಿಟರಿ ಕಾರ್ಯಾಚರಣೆಯಿಂದ ಪದೇಪದೆ ಕದನ ವಿರಾಮ ಮುರಿದು ಬಿದ್ದಿರುವುದನ್ನು ತೋರಿಸುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net