ಇತ್ತೀಚೆಗೆ ಲೆಬನಾನ್ ರಾಜಧಾನಿ ಬೀರತ್ ಮೇಲೆ ವೈಮಾನಿಕ ದಾಳಿ ನಡೆಸುವುದಾಗಿ ಇಸ್ರೇಲ್ ಬೆದರಿಕೆ ಹಾಕಿದ್ದಾಗ, ಟ್ರಂಪ್ ಫೋನ್ ಮಾಡಿ ನೆತನ್ಯಾಹು ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ನಿಮ್ಮ ಈ ಹಠಮಾರಿ ಧೋರಣೆಯಿಂದಾಗಿ ಜಗತ್ತಿನಲ್ಲಿ ಈಗ ಎಲ್ಲರೂ ನಿಮ್ಮನ್ನು ಮತ್ತು ಇಸ್ರೇಲ್ ಅನ್ನು ದ್ವೇಷಿಸುತ್ತಿದ್ದಾರೆ ಎಂದು ಟ್ರಂಪ್ ನೇರವಾಗಿಯೇ ಎಚ್ಚರಿಸಿದ್ದರು ಎನ್ನಲಾಗಿದೆ. ಮತ್ತೊಂದೆಡೆ, ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯು ಈ ಎಲ್ಲಾ ಗೂಢಚರ್ಯೆಯ ಆರೋಪಗಳನ್ನು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದೆ,(ಏಜೆನ್ಸೀಸ್).