ಸಂಪುಟ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಈ 15 ಅಂಶಗಳ ಶಾಂತಿ ಯೋಜನೆಯನ್ನು ನಾವು ಪುರಸ್ಕರಿಸುವುದಿಲ್ಲ. ನಾನು ಪ್ರಧಾನಿ ಆಗಿರುವವರೆಗೆ, ಪ್ಯಾಲೆಸ್ತೀನ್ ರಾಷ್ಟ್ರ ಅನ್ನೋದು ಇರುವುದಿಲ್ಲ. ಹಮಾಸ್ ಕೇವಲ ಹೆಸರಿಗಷ್ಟೇ ಆಯುಧ ಮರೆಮಾಚುವುದಲ್ಲ, ಸಂಪೂರ್ಣವಾಗಿ ನಿರಾಯುಧವಾಗಬೇಕು. ಅಲ್ಲಿಯವರೆಗೆ, ಇಸ್ರೇಲ್ ಸೇನಾ ಪಡೆ ಗಾಜಾದಿಂದ ಹೊರಗೆ ಕಾಲಿಡುವುದಿಲ್ಲ ಎಂದು ಅಮೆರಿಕ ನಡೆ ವಿರುದ್ಧ ಗುಡುಗಿದ್ದಾರೆ. ಇದು ಟ್ರಂಪ್‌ಗೆ ಭಾರಿ ಮುಖಭಂಗ ಉಂಟು ಮಾಡಿದೆ.