ಟೆಲ್ ಅವೀವ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಐತಿಹಾಸಿಕ ಕದನ ವಿರಾಮ ಒಪ್ಪಂದವು ಇಸ್ರೇಲ್ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ತಮ್ಮ ಪರಮ ಮಿತ್ರ ದೇಶವಾದ ಅಮೆರಿಕವು ಇಸ್ರೇಲ್‌ನ( Israel Rages Over US Iran Peace Deal) ಭದ್ರತಾ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಇರಾನ್ ಜೊತೆ ಕೈಜೋಡಿಸಿದೆ ಎಂದು ಇಸ್ರೇಲ್‌ನ ರಾಜಕೀಯ ಪಕ್ಷಗಳು, ರಕ್ಷಣಾ ತಜ್ಞರು ಮತ್ತು ವಿಪಕ್ಷದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದದಿಂದ ಇಸ್ರೇಲ್ ತೀವ್ರ ಆಘಾತಕ್ಕೊಳಗಾಗಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ರಕ್ಷಣಾ ನೀತಿ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷಗಳು ಮುಗಿಬಿದ್ದಿವೆ.