ದುಬೈನಲ್ಲಿ ಸ್ಫೋಟದ ಸದ್ದು, ಮಧ್ಯಪ್ರಾಚ್ಯ ಉದ್ವಿಗ್ನ! ಇಸ್ರೇಲ್​-ಇರಾನ್​ ಸಂಘರ್ಷ ಬೆನ್ನಲ್ಲೇ ಭಾರತದ ಏರ್​ಪೋರ್ಟ್​ಗಳಲ್ಲಿ ಹೈ ಅಲರ್ಟ್​​ | Israel-Iran War

ಇಸ್ರೇಲ್​-ಇರಾನ್​ ನಡುವೆ ಸಂಘರ್ಷ
ಇಸ್ರೇಲ್​-ಇರಾನ್​ ನಡುವೆ ಸಂಘರ್ಷ
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲೆ ಇಸ್ರೇಲ್​-ಯುಎಸ್​ ಜಂಟಿ ಕ್ಷಿಪಣಿ ದಾಳಿ
  • ದುಬೈನಲ್ಲೂ ಸ್ಫೋಟದ ಸದ್ದು ವರದಿ
  • ಇರಾನ್​ ಮೇಲಿನ ದಾಳಿ ಬೆನ್ನಲ್ಲೇ ಭಾರತದ ಏರ್​ಪೋರ್ಟ್​ಗಳಲ್ಲಿ ಹೈ ಅಲರ್ಟ್
ನವದೆಹಲಿ: ಇರಾನ್​ ಮೇಲೆ ಇಸ್ರೇಲ್​-ಅಮೆರಿಕ ನಡೆಸಿದ ಜಂಟಿ ಕ್ಷಿಪಣಿ ದಾಳಿ ಇದೀಗ ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆ ಸೃಷ್ಟಿಸಿದೆ. ಕೇವಲ ದುಬೈ, ಇರಾನ್​ ಮತ್ತು ಇಸ್ಲಾಮಿಕ್​ ರಾಷ್ಟ್ರಗಳ ಮೇಲೆ ಮಾತ್ರವಲ್ಲ, ಭಾರತಕ್ಕೂ ಈ ಬಿಸಿ ತಟ್ಟಲಾರಂಭಿಸಿದೆ. ಈ ಉದ್ವಿಗ್ನ ಸಮಯದಲ್ಲಿ, ಭಾರತೀಯ ವಾಯುಯಾನ ವಲಯವೂ ಸಂಪೂರ್ಣವಾಗಿ ಹೈಅಲರ್ಟ್​ ಘೋಷಿಸಿದೆ.
ಇರಾನಿನ ರಾಜಧಾನಿ ಟೆಹ್ರಾನ್ ಸೇರಿ ಹಲವಾರು ಪ್ರದೇಶಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ, ಅದರ ನೆರೆಯ ರಾಷ್ಟ್ರಗಳು ತಮ್ಮ ವಾಯು ಮಾರ್ಗಗಳನ್ನು ತಕ್ಷಣಕ್ಕೆ ಮುಚ್ಚುತ್ತಿವೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು, ಭಾರತದ ಎಲ್ಲಾ ಏರ್​ಪೋರ್ಟ್​ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವುದಾಗಿ ಘೋಷಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು, ದೇಶಾದ್ಯಂತ ವಿಮಾನ ನಿಲ್ದಾಣಗಳ ಸನ್ನದ್ಧತೆಯ ಪರಿಶೀಲಿಸಿದರು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ), ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ವಿಮಾನಯಾನ ಸಂಸ್ಥೆಗಳು ಮತ್ತು ಪ್ರಮುಖ ವಿಮಾನ ನಿಲ್ದಾಣ ನಿರ್ವಾಹಕರೊಂದಿಗೆ ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನವನ್ನು ನಡೆಸಿದರು.
ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು. ಕೆಲವು ದೇಶಗಳ ವಾಯುಪ್ರದೇಶವನ್ನು ಮುಚ್ಚಿರುವ ಹಿನ್ನೆಲೆಯಲ್ಲಿ, ಅನಿರೀಕ್ಷಿತ ಲ್ಯಾಂಡಿಂಗ್ ಅಥವಾ ಮಾರ್ಗ ಬದಲಾವಣೆಗಳ ಸಾಧ್ಯತೆಯಿದೆ. ಆದ್ದರಿಂದ, ಭಾರತೀಯ ಏರ್​ಪೋರ್ಟ್​ಗಳು ನಿಗದಿತ ಲ್ಯಾಂಡಿಂಗ್‌ಗಳನ್ನು ನಿರ್ವಹಿಸಲು ಸಿದ್ಧರಾಗಿರಲು ಆದೇಶಗಳನ್ನು ನೀಡಲಾಗಿದೆ. ಪ್ರಯಾಣಿಕರ ಸೌಲಭ್ಯಗಳ ವಿಷಯದಲ್ಲೂ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಈ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡಿರುವುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net