ಹಮಾಸ್‌ ನಾಯಕ ರಯೀದ್ ಹತ್ಯೆ; ಇಸ್ರೇಲ್ ಸೈನಿಕರ ಸಾವಿನ ಸೇಡು ಪೂರ್ಣ : ನೆತನ್ಯಾಹು | Israel

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್‌ ಕಮಾಂಡರ್ ರಯೀದ್ ಸಯೀದ್ ಸಾವು
  • ರಯೀದ್ ಹಮಾಸ್‌ನ ಶಸ್ತ್ರಾಸ್ತ್ರ ತಯಾರಿಕಾ ಜಾಲದ ಮುಖ್ಯಸ್ಥ
  • 2023 ರಲ್ಲಿ ಇಸ್ರೇಲ್ ಮೇಲಿನ ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದ ರಯೀದ್ ಸಯೀದ್
  • ನಮ್ಮ ಸೈನಿಕರ ಸಾವಿಗೆ ಸೇಡು ತೀರಿಸಿಕೊಂಡಿದ್ದೇನೆ : ನೆತನ್ಯಾಹು
ಗಾಜಾ : ಗಾಜಾ ನಗರದಲ್ಲಿ ಇಸ್ರೇಲ್(Israel) ನಡೆಸಿದ ದಾಳಿಯಲ್ಲಿ ಹಮಾಸ್‌ನ ಎರಡನೇ ಕಮಾಂಡರ್ ರಯೀದ್ ಸಯೀದ್ ಸಾವನ್ನಪ್ಪಿದ್ದಾರೆ. ಗಾಜಾ ನಗರದಲ್ಲಿ ಕಾರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ (ಐಡಿಎಫ್) ಶನಿವಾರ (ಡಿ.13) ಹೇಳಿಕೊಂಡಿದೆ. ಆದಾಗ್ಯೂ, ಹಮಾಸ್ ಇನ್ನೂ ಅಧಿಕೃತವಾಗಿ ರಯೀದ್ ಸಯೀದ್ ಸಾವನ್ನು ದೃಢಪಡಿಸಿಲ್ಲ.ರಯೀದ್ ಹಮಾಸ್‌ನ ಅಲ್-ಖಾಸಿಮ್ ಬ್ರಿಗೇಡ್‌ಗಳ ಕಮಾಂಡರ್ ಇನ್ ಚೀಫ್ ಆಗಿದ್ದು, ಹಮಾಸ್‌ನ ಶಸ್ತ್ರಾಸ್ತ್ರ ತಯಾರಿಕಾ ಜಾಲದ ಮುಖ್ಯಸ್ಥರಾಗಿದ್ದರು ಮತ್ತು ಅಕ್ಟೋಬರ್ 2023 ರಲ್ಲಿ ಇಸ್ರೇಲ್ ಮೇಲಿನ ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಹಮಾಸ್ ಇಸ್ರೇಲಿ ಸೈನಿಕರ ಮೇಲೆ ದಾಳಿ ಮಾಡಿ ಇಬ್ಬರು ಇಸ್ರೇಲಿ ಸೈನಿಕರನ್ನು ಗಾಯಗೊಳಿಸಿದ ನಂತರ ಈ ದಾಳಿ ಸಂಭವಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ನಂತರ ಸಯೀದ್‌ನನ್ನು ಗುರಿಯಾಗಿಸಲು ಆದೇಶಿಸಿದರು. ಸೈನಿಕರ ಸಾವಿಗೆ ತಾನು ಸೇಡು ತೀರಿಸಿಕೊಂಡಿದ್ದೇನೆ ಎಂದು ನೆತನ್ಯಾಹು ಹೇಳಿದ್ದಾರೆ.

ಸಯೀದ್ ಬಗ್ಗೆ ಗುಪ್ತಚರ ಮಾಹಿತಿ ದೊರೆತಿತ್ತು

ಇಸ್ರೇಲ್ ರಕ್ಷಣಾ ಪಡೆಗಳು (IDF) ರಯೀದ್ ಗಾಜಾ ನಗರದ ಪಶ್ಚಿಮ ಭಾಗದಲ್ಲಿ ಪ್ರಯಾಣಿಸುತ್ತಿದ್ದಾನೆ ಎಂದು ನಮಗೆ ನೈಜ ಸಮಯದ ಗುಪ್ತಚರ ಮಾಹಿತಿ ಸಿಕ್ಕಿದ ಹಿನ್ನಲೆಯಲ್ಲಿ ಈ ಅವಕಾಶವನ್ನು ನಾವು ಕಳೆದುಕೊಳ್ಳದೇ ಅವನನ್ನು ಕೊಲ್ಲಲು ತಕ್ಷಣ ಕಾರ್ಯರೂಪಿಸಿದೆವು ಎಂದು ಹೇಳಿವೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net