ಹುಚ್ಚು ಸಾಹಸಕ್ಕೆ ಕೈಹಾಕಿದ IShowSpeed: ಚೀತಾ ಜೊತೆಗಿನ ರೇಸ್ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!

IShowSpeed
IShowSpeed
Published on
ಅಮೆರಿಕ: ಪ್ರಖ್ಯಾತ ಅಮೇರಿಕನ್ ಯೂಟ್ಯೂಬರ್ ಮತ್ತು ಸ್ಟ್ರೀಮರ್ IShowSpeed (ಡ್ಯಾರೆನ್ ವ್ಯಾಟ್ಕಿನ್ಸ್ ಜೂನಿಯರ್) ಅತೀ ವೇಗವಾಗಿ ಓಡುವ ಪ್ರಾಣಿ ಚೀತಾ (Cheetah) ಜೊತೆ ರೇಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. 
ಹೌದು, ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಅವರು ಹಂಚಿಕೊಂಡ ಈ ವಿಡಿಯೋ ಕಂಡು ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.

ಚೀತಾ ವಿರುದ್ಧ ರೇಸ್: ಏನಿದು ಘಟನೆ?

ಸ್ಪೀಡ್ ಅವರು ಯಾವಾಗಲೂ ವಿಭಿನ್ನ ಮತ್ತು ಸಾಹಸಮಯ ಸವಾಲುಗಳಿಗೆ ಹೆಸರಾದವರು. ಈ ಬಾರಿ ಅವರು ಆಫ್ರಿಕಾದಲ್ಲಿ ಒಂದು ಚೀತಾದೊಂದಿಗೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಡಿಯೋದಲ್ಲಿ ಸ್ಪೀಡ್ ಅವರು ಅತ್ಯಂತ ವೇಗವಾಗಿ ಓಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಆದರೆ, ಚೀತಾ ತನ್ನ ನೈಸರ್ಗಿಕ ವೇಗವನ್ನು ಪ್ರದರ್ಶಿಸಿ ಸುಲಭವಾಗಿ ಸ್ಪೀಡ್‌ಗಿಂತ ಮುಂದೆ ಹೋಗುತ್ತದೆ. ಓಟ ಮುಗಿದ ನಂತರ ದಣಿದಿದ್ದ ಸ್ಪೀಡ್, ತಮಾಷೆಯಾಗಿ "ನಾನೇ ಗೆದ್ದೆನಾ?" ಎಂದು ಕೇಳುವ ಮೂಲಕ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು "ಇದು ನಿಜವೇ ಅಥವಾ ಎಡಿಟ್ ಮಾಡಲಾದ ವಿಡಿಯೋವೇ?" ಎಂದು ಪ್ರಶ್ನಿಸಿದ್ದಾರೆ. ಆದರೆ ಈ ರೇಸ್ ನಿಯಂತ್ರಿತ ಪರಿಸರದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ನಡೆದಿದೆ ಎಂದು ವರದಿಯಾಗಿದೆ.
"ಅಟ್ಲೀಸ್ಟ್ ನೀನು ಪ್ರಯತ್ನಿಸಿದೆ" ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "ಚೀತಾ ಕೇವಲ ಶೇ. 20ರಷ್ಟು ವೇಗದಲ್ಲಿ ಓಡುತ್ತಿದೆ, ಆದರೂ ನೀನು ಸೋತೆ" ಎಂದು ಹಾಸ್ಯ ಮಾಡಿದ್ದಾರೆ. ಅಲ್ಲದೆ, ವಿಡಿಯೋದ ಆರಂಭದಲ್ಲಿ ಚೀತಾ ಸ್ಪೀಡ್ ಅವರ ಕಾಲಿಗೆ ಪರಚಿದ್ದರಿಂದ ಸಣ್ಣ ಗಾಯವಾಗಿತ್ತು, ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.
ಈ ಹಿಂದೆ ಒಲಿಂಪಿಕ್ ಚಾಂಪಿಯನ್ ನೋವಾ ಲೈಲ್ಸ್ ಅವರೊಂದಿಗೂ ರೇಸ್ ಮಾಡಿ ಸೋತಿದ್ದ ಸ್ಪೀಡ್, ಈಗ ಪ್ರಾಣಿ ಪ್ರಪಂಚದ ಅತಿ ವೇಗದ ರನ್ನರ್ ಜೊತೆ ಸ್ಪರ್ಧಿಸಿರುವುದು ಅವರ "Speed Goes Pro" ಸರಣಿಯ ಭಾಗವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net