ಟೆಹ್ರಾನ್: ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿದೆ. ಅಮೆರಿಕ ಮತ್ತು ಇರಾನ್ ನಡುವಿನ 14 ದಿನಗಳ ಕದನ ವಿರಾಮವು ಏಪ್ರಿಲ್ 22ಕ್ಕೆ ಅಂತ್ಯಗೊಳ್ಳಲಿದ್ದು, ಇಡೀ ಪಶ್ಚಿಮ ಏಷ್ಯಾ ಅಕ್ಷರಶಃ ಕುದಿಯುವ ಕವಾಯಿನಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಾಂಬ್ ದಾಳಿ ಎಚ್ಚರಿಕೆಯ ಬೆನ್ನಲ್ಲೇ, ಇರಾನ್‌ನ ಉನ್ನತ ಸಂಧಾನಕಾರ ಮೊಹಮ್ಮದ್ ಬಘೇರ್ ಘಾಲಿಬಾಫ್(Mohammad Bagher Ghalibaf) ಅವರು ನಮ್ಮ ಬಳಿಯೂ ಹೊಸ ಯುದ್ಧತಂತ್ರಗಳಿವೆ ಎಂದು ಗುಡುಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸ್ಫೋಟಕಗೊಳಿಸಿದೆ.