ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಮೂಲಕ ಇರಾನ್‌ಗೆ 15 ಅಂಶಗಳ ಸಂಧಾನದ ಪಟ್ಟಿಯನ್ನು ರವಾನಿಸಿದ್ದರು. ಇರಾನ್ ಈಗಾಗಲೇ ಈ ಷರತ್ತುಗಳಿಗೆ ಒಪ್ಪಿಗೆ ನೀಡಿದೆ ಎಂದು ಟ್ರಂಪ್ ಈ ಹಿಂದೆ ಹೇಳಿಕೊಂಡಿದ್ದರು. ಆದರೆ, ಇರಾನ್ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಅಮೆರಿಕದ ಜೊತೆ ನಾವು ಯಾವುದೇ ನೇರ ಮಾತುಕತೆ ನಡೆಸಿಲ್ಲ, ಎಲ್ಲವೂ ಮಧ್ಯಸ್ಥಿಕೆದಾರರ ಮೂಲಕವೇ ನಡೆದಿದೆ. ಅವರ ಬೇಡಿಕೆಗಳು ಅತಿರೇಕವಾಗಿವೆ ಎಂದು ಬಘೈ ತಿಳಿಸಿದ್ದಾರೆ.