ಇರಾನ್ ಉಡಾವಣೆ ಮಾಡಿರುವ ಖದರ್-110 ಸರಣಿಯ ಕ್ಷಿಪಣಿಗಳು ಸುಮಾರು 1,800 ರಿಂದ 2,000 ಕಿಲೋಮೀಟರ್ ದೂರದ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯ ಹೊಂದಿವೆ. ಇದರರ್ಥ, ಇರಾನ್ನ ಭೂಪ್ರದೇಶದಲ್ಲಿ ಕುಳಿತು ಇಸ್ರೇಲ್ನ ಯಾವುದೇ ಮೂಲೆಯನ್ನು ಕ್ಷಣಾರ್ಧದಲ್ಲಿ ಧೂಳೀಪಟ ಮಾಡಬಹುದು. ಈ ಕ್ಷಿಪಣಿಗಳನ್ನು ಇರಾನ್ ಈ ಹಿಂದೆ ಕೇವಲ ಯುದ್ಧಾಭ್ಯಾಸಗಳಲ್ಲಿ ಪ್ರದರ್ಶಿಸಿತ್ತು, ಆದರೆ ಈಗ ಅವುಗಳನ್ನು ನೇರವಾಗಿ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಪ್ರಯೋಗಿಸಿದೆ.