ಪ್ರಸ್ತುತ ಇರಾನ್ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆಗಳು ಬಲು ದುಬಾರಿಯಾಗಿವೆ. ಉದ್ಯೋಗ ಕೊರತೆ ಕಾಡುತ್ತಿದ್ದು, ಜೀವನ ನಿರ್ವಹಣೆ ವೆಚ್ಚ ದುಪ್ಪಟ್ಟಾಗಿದೆ. ಇದರಿಂದ ಬೇಸತ್ತಿರುವ ಜನರು ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ (ಜ.08) ರೆಜಾ ಪಹ್ಲವಿ ಕರೆಗೆ ಸಾವಿರಾರು ಪ್ರತಿಭಟನಾಕಾರರು ಒಮ್ಮೆಲೆ ಬೀದಿಗೆ ಇಳಿದರು. ಇರಾನ್‌ನ ಸುಪ್ರೀಂ ನಾಯಕ ಹಾಗೂ ಅಧ್ಯಕ್ಷ ಅಲಿ ಹೊಸೇನಿ ಖಮೇನಿ ಆಡಳಿತ ಬದಲಾವಣೆಗೆ ಭಾರೀ ಆಗ್ರಹಗಳು ಕೇಳಿಬರುತ್ತಿದ್ದು, ಇದು ಯಾವ ಹಂತಕ್ಕೆ ಹೋಗಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).