ಇರಾನ್ನ ಖಾಸಿಮ್ ಸುಲೈಮಾನಿ ಸಾವಿಗೆ ಪ್ರತೀಕಾರಕ್ಕಾಗಿ ಇವಾಂಕಾಳ ಮನೆಯ ನೀಲನಕ್ಷೆ ಪಡೆದಿದ್ದ ಅಲ್-ಸಾದಿ, ಟ್ವಿಟರ್ನಲ್ಲಿ ಮನೆಯ ನಕ್ಷೆಯನ್ನು ಪೋಸ್ಟ್ ಮಾಡಿ, ನಾನು ಟ್ರಂಪ್ನ ಮಗಳನ್ನು ಕೊಲ್ಲುತ್ತೇನೆ, ಇರಾನಿನ ಮೇಲೆ ಅಮೆರಿಕ ಮಾಡಿದ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುತ್ತೇನೆ. ನನ್ನ ಬಳಿ ಇವಾಂಕಾಳ ಮನೆಯ ನೀಲನಕ್ಷೆ ಇದೆ ಇನ್ನು ದಾಳಿ ಮಾಡುವುದು ಕಷ್ಟವಲ್ಲ ಎಂದು ಬರೆದುಕೊಂಡಿದ್ದನು.