ಮತ್ತೊಂದೆಡೆ, 14 ಮಿಲಿಯನ್‌ಗಿಂತಲೂ ಹೆಚ್ಚು ಇರಾನಿಯನ್ನರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಇರಾನಿನ ಅಧ್ಯಕ್ಷ ಮಸೌದ್ ಪೆಶ್ಮೆರ್ಗಾ ಹೇಳಿರುವುದು ಅಚ್ಚರಿಯ ಬೆಳವಣಿಗೆ. ಇದನ್ನು ನೋಡಿದರೆ, ಯಾವುದೇ ಕಾರಣಕ್ಕೂ ನಾವು ನಿಮ್ಮ ಮಾತಿಗೆ ಅಥವಾ ಒಪ್ಪಂದಗಳಿಗೆ ತಲೆದೂಗುವುದಿಲ್ಲ ಎಂದು ಇರಾನ್ ಗಟ್ಟಿಯಾಗಿ ಹೇಳಿದೆ. ಇದರಿಂದ ಕುಪಿತಗೊಂಡಿರುವ ಟ್ರಂಪ್, 47 ವರ್ಷಗಳ ದಬ್ಬಾಳಿಕೆ, ಭ್ರಷ್ಟಾಚಾರ ಅಂತಿಮವಾಗಿ ಕೊನೆಗೊಳ್ಳುತ್ತದೆ ಎಂದು ನುಡಿದಿದ್ದಾರೆ.