ಪ್ರಸ್ತುತ, ಅಮೆರಿಕ ಯುದ್ಧವನ್ನು ನಿಲ್ಲಿಸಲು ಇರಾನ್ಗೆ 15 ಪ್ರಮುಖ ವಿಷಯಗಳನ್ನು ಒಳಗೊಂಡ ಪತ್ರವನ್ನು ಮುಂದಿಟ್ಟಿದೆ. ಆದರೆ, ಇದಕ್ಕೆ ಒಪ್ಪದ ಇರಾನಿನ ಸೇನೆ, ಇದೀಗ ಅಮೆರಿಕದ ಆಪ್ತಮಿತ್ರ ಇಸ್ರೇಲ್ ಮೇಲೆ ತನ್ನ ಕ್ಷಿಪಣಿಗಳ ದಾಳಿಯನ್ನು ಮುಂದುವರಿಸಿದೆ. ಟೆಹ್ರಾನ್ ತನ್ನ ಮಿಸೈಲ್ಗಳ ಮೇಲೆ ಒಗ್ಗಟ್ಟನ್ನು ತೋರಿಸಿದ ದೇಶಗಳಿಗೆ ಧನ್ಯವಾದ ಹೇಳುವ ಸಂದೇಶಗಳನ್ನು ಹೊತ್ತು ಗುರಿಯನ್ನು ತಲುಪಿವೆ. ಈ ವಿಷಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.