ಇಸ್ರೇಲ್ ದಾಳಿಯಲ್ಲಿ ಖಮೇನಿ ಮಾತ್ರವಲ್ಲದೆ, ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್ ಗಾರ್ಡ್ಸ್ ಕಮಾಂಡರ್ ಪಕ್ಸೌರ್ ಸಹ ಮೃತಪಟ್ಟಿದ್ದಾರೆ. ಒಟ್ಟು ಏಳು ಹಿರಿಯ ಅಧಿಕಾರಿಗಳು ಸಾವಿಗೀಡಾಗಿದ್ದಾರೆ. ಐಎಎಫ್ ಫೈಟರ್ ಜೆಟ್‌ಗಳು ಇರಾನ್‌ನಾದ್ಯಂತ ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿವೆ ಎಂದು ಇಸ್ರೇಲ್ ಘೋಷಿಸಿದೆ. ಇರಾನ್ ರಕ್ಷಣಾ ನಾಯಕತ್ವದ ಏಳು ಹಿರಿಯ ಅಧಿಕಾರಿಗಳಾದ ಅಲಿ ಶಮ್ಖಾನಿ, ಮೊಹಮ್ಮದ್ ಪಕ್ಪೂರ್, ಸಲೇಹ್ ಅಸಾದಿ, ಮೊಹಮ್ಮದ್ ಶಿರಾಜಿ, ಅಜೀಜ್ ನಾಸಿರ್ಜಾದೆ, ಹೊಸೇನ್ ಜಬಲ್ ಅಮೇಲಿಯನ್ ಮತ್ತು ರೆಜಾ ಮೊಜಾಫರಿ-ನಿಮಾಯಾ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ವಾಯುಪಡೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ, (ಏಜೆನ್ಸೀಸ್).