ಇರಾನ್‌ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ‘ತಸ್ನಿಮ್’ ವರದಿ ಮಾಡಿರುವ ಪ್ರಕಾರ, ಭಾನುವಾರ ಮುಂಜಾನೆ ಅಮೆರಿಕ ಮಿಲಿಟರಿಗೆ ಸೇರಿದ ಯುದ್ಧ ಡ್ರೋನ್ ಇರಾನ್‌ನ ಪ್ರಾದೇಶಿಕ ವಾಯುಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿತ್ತು. ಅಲ್ಲದೆ, ಇರಾನ್‌ನ ರಹಸ್ಯ ಮಿಲಿಟರಿ ನೆಲೆಗಳ ಮೇಲೆ ಕಣ್ಣಿಡಲು ಮತ್ತು ದಾಳಿ ನಡೆಸುವ ಗುರಿಯೊಂದಿಗೆ ಇದು ಬಂದಿತ್ತು ಎನ್ನಲಾಗಿದೆ. ಇದನ್ನು ತಕ್ಷಣವೇ ಪತ್ತೆಹಚ್ಚಿದ ಇರಾನ್‌ನ ಸುಧಾರಿತ ವಾಯು ರಕ್ಷಣಾ ರೇಡಾರ್ ವ್ಯವಸ್ಥೆಗಳು, ಅತ್ಯಾಧುನಿಕ ಡಿಫೆನ್ಸ್ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಡ್ರೋನ್ ಅನ್ನು ಸಂಪೂರ್ಣವಾಗಿ ನಾಶಪಡಿಸಿವೆ.