ಈ 3 ದೇಶಗಳು​... ಹಾರ್ಮುಜ್​ ಜಲಸಂಧಿ ಬಂದ್​ ಬೆನ್ನಲ್ಲೇ ಇರಾನ್​ ಅಚ್ಚರಿ ಹೇಳಿಕೆ; ಭಾರತಕ್ಕೆ ಬಿಗ್ ರಿಲೀಫ್​? | Strait of Hormuz

ಹಾರ್ಮುಜ್ ಜಲಸಂಧಿ
ಹಾರ್ಮುಜ್ ಜಲಸಂಧಿ
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್ ಹಾರ್ಮುಜ್ ಜಲಸಂಧಿ ಬಂದ್​
  • ಕಳೆದ 5 ದಿನಗಳಿಂದ ನಿಂತಲ್ಲೇ ನಿಂತಿರುವ ಭಾರತದ ಹಡಗುಗಳು
  • ಇರಾನ್​ ನೀಡಿರುವ ಹೇಳಿಕೆಯಿಂದ ಭಾರತಕ್ಕೆ ಬಿಗ್ ರಿಲೀಫ್​?
Strait of Hormuz​: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಾವುದೇ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಬಿಡಕೂಡದು ಎಂದು ರೇಡಿಯೋ ಎಚ್ಚರಿಕೆಗಳನ್ನು ನೀಡಿದ್ದೇ ತಡ ಇದೀಗ ಇದರ ಪರಿಣಾಮವಾಗಿ ಪ್ರಮುಖ ಜಲಮಾರ್ಗವು ಸಂಪೂರ್ಣವಾಗಿ ಬಂದ್​ ಆಗಿದೆ. ಭಾರತ ಸೇರಿದಂತೆ ತೈಲದ ಮೇಲೆ ಶೇ.50ರಿಂದ 60ರಷ್ಟು ಅವಲಂಬಿಸಿದ್ದ ಹಲವು ರಾಷ್ಟ್ರಗಳಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಇರಾನ್ ತೆಗೆದುಕೊಂಡಿರುವ ಈ ಕಟು ನಿರ್ಧಾರವು ಇತರೆ ರಾಷ್ಟ್ರಗಳಿಗೆ ತೈಲ ಬೇಡಿಕೆಯನ್ನು ಹೆಚ್ಚಿಸಲಿದೆ. 

ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್​ ಧಗಧಗ

ಫೆ.28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಜಂಟಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನಿನ ಹಲವಾರು ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ಮಾಡಿತು. ಇಷ್ಟಕ್ಕೆ ನಿಲ್ಲದ ಈ ದಾಳಿ, ಇರಾನ್‌ನ ಸರ್ವೋಚ್ಚ ನಾಯಕ ಅಯೊತಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಕಾರಣವಾಯಿತು. ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ಪಣತೊಟ್ಟಿರುವ ಇರಾನ್, ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. 
ಕಳೆದ ಎರಡ್ಮೂರು ದಿನಗಳಿಂದ ಹಾರ್ಮುಜ್​ ಜಲಸಂಧಿ ಬಂದ್ ಆಗಿರುವುದರಿಂದ ಭಾರತ ಹಡಗುಗಳು ಸಹ ನಿಂತಲ್ಲೇ ನಿಂತಿವೆ. ಇದರ ಪರಿಣಾಮವಾಗಿ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿಢೀರ್​ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ತಜ್ಞರು ತಿಳಿಸಿದ್ದಾರೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ದೇಶದ ಜನತೆ ಪೆಟ್ರೋಲ್​ ಬಂಕ್​ಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಮಹತ್ವದ ಬೆಳವಣಿಗೆಗಳ ನಡುವೆ ಇದೀಗ ಇರಾನ್ ತನ್ನ ಒಂದೇ ಒಂದು ಹೇಳಿಕೆಯಿಂದ ಭಾರತೀಯರ ಆತಂಕವನ್ನು ಇಳಿಸದಂತೆ ತೋರಿದೆ.

ಇರಾನ್ ಅಧಿಕೃತ ಹೇಳಿಕೆಯೇನು? 

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಐಬಿ), ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುವುದು ಎಂದಿನಂತೆ ಮುಂದುವರೆದಿದೆ. ಆದರೆ, ಈ ಯುದ್ಧಕ್ಕೆ ಕಾರಣವಾಗಿರುವ ಯುನೈಟೆಡ್ ಸ್ಟೇಟ್ಸ್, ಇಸ್ರೇಲ್ ಮತ್ತು ಯುರೋಪಿಯನ್ ದೇಶಗಳ ಹಡಗುಗಳ ಚಲನೆಯ ಮೇಲೆ ಮಾತ್ರ ನಾವು ನಿರ್ಬಂಧಗಳನ್ನು ವಿಧಿಸುತ್ತಿದ್ದೇವೆ ಎಂದು ಹೇಳಿದೆ. 

ನಮಗೆ ಆ ಹಕ್ಕಿದೆ...

ಮತ್ತೊಂದೆಡೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇತ್ತೀಚಿನ ಹೇಳಿಕೆಯಲ್ಲಿ, ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಪ್ರತಿಪಾದಿಸಿದೆ. ಯಾವ ದೇಶಗಳ ಹಡಗುಗಳು ಈ ಜಲಸಂಧಿಯ ಮೂಲಕ ಹಾದುಹೋಗಬಹುದು ಎಂಬುದನ್ನು ನಿರ್ಧರಿಸುವ ಹಕ್ಕು ನಮಗಿದೆ. ಇಲ್ಲಿ ಯುಎಸ್, ಇಸ್ರೇಲ್, ಯುರೋಪ್ ಮತ್ತು ಅವರನ್ನು ಬೆಂಬಲಿಸುವ ದೇಶಗಳಿಗೆ ಸೇರಿದ ಯಾವುದೇ ಹಡಗುಗಳು ಜಲಮಾರ್ಗದಲ್ಲಿ ಕಂಡುಬಂದರೆ ಖಂಡಿತವಾಗಿ ಅವುಗಳನ್ನು ತಡೆಯುತ್ತೇವೆ ಎಂದಿದೆ. 

ತೈಲ ಬೆಲೆಗಳಲ್ಲಿ ಬದಲಾವಣೆ?

ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರ ಸ್ಥಗಿತಗೊಂಡ ಕಾರಣ, ಇದು ಅಂತಾರಾಷ್ಟ್ರೀಯ ತೈಲ ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬೀರುವುದು ಖಚಿತ. ಆದಾಗ್ಯೂ, ಮಂಗಳವಾರ ಇರಾನ್ ಚೀನಾದ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡುವುದಾಗಿ ಘೋಷಿಸಿತು. ಯುಎಸ್, ಇಸ್ರೇಲ್ ಮತ್ತು ಯುರೋಪ್ ಹೊರತುಪಡಿಸಿ ಎಲ್ಲಾ ದೇಶಗಳ ಹಡಗುಗಳಿಗೆ ಅವಕಾಶ ನೀಡುವುದಾಗಿ ತನ್ನ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿರುವುದು ಗಮನಾರ್ಹ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net