ಟ್ರಂಪ್ 10 ದಿನಗಳ ಕಾಲ ತಾತ್ಕಾಲಿಕ ಕದನ ವಿರಾಮಕ್ಕೆ ಘೋಷಿಸಿದ್ದೇ ಆದರೂ ತನ್ನ ರಾಷ್ಟ್ರದ ಮೇಲೆ ನಡೆದ ದಾಳಿಗಳನ್ನು ಇರಾನ್ ಖಂಡಿಸಿ, ಸೀಜ್ ಫೈರ್ ಮಧ್ಯೆಯೂ ಸರಣಿ ದಾಳಿಯನ್ನು ಮುಂದುವರಿಸಿತು. ನೇರವಾಗಿ ಅಮೆರಿಕೆ ಜೊತೆ ಮುಖಾಮುಖಿಯಾಗಿ ಕೂತು ಸಂಧಾನದ ಬಗ್ಗೆ ಮಾತನಾಡಲು ಬಯಸದ ಇರಾನ್, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಸಿದ ಮೊದಲ ಮಾತುಕತೆ ವಿಫಲವಾಯಿತು. ಇದರಿಂದ ಟ್ರಂಪ್ ಸಿಡಿಮಿಡಿಗೊಂಡರು. ಆದರೆ, ಇತ್ತೀಚೆಗೆ ನಡೆದ ಎರಡನೇ ಬಾರಿಯ ಮಾತುಕತೆ ಕೂಡ ಫಲ ನೀಡದಿರುವುದು ಸದ್ಯ ಮುಂದೆ ದೊಡ್ಡದೇನೋ ಸಂಭವಿಸಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ.