'ಇರಾನ್ ಹ್ಯೂಮನ್ ರೈಟ್ಸ್' (IHRNGO) ಸಂಘಟನೆಯ ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. "ದೇವರಿಗೆ ವಿರುದ್ಧವಾಗಿ ಯುದ್ಧ ಸಾರಿದ್ದಾರೆ" (Waging war against God) ಎಂಬ ಗಂಭೀರ ಆರೋಪವನ್ನು ಈ ಯುವಕರ ಮೇಲೆ ಹೊರಿಸಲಾಗಿತ್ತು. ತೀವ್ರವಾದ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಿ ಇವರಿಂದ ಬಲವಂತವಾಗಿ ಒಪ್ಪಿಗೆ ಪಡೆಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಅಂತರಾಷ್ಟ್ರೀಯ ಕಾನೂನುಗಳ ಪ್ರಕಾರ ಯಾವುದೇ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ನಾಮಮಾತ್ರದ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಕಿಡಿಕಾರಿದೆ. ಆರೋಪಿಗಳಿಗೆ ಸರಿಯಾದ ಕಾನೂನು ನೆರವು ಅಥವಾ ರಕ್ಷಣಾ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶವನ್ನೇ ನೀಡಲಾಗಿಲ್ಲ ಎಂದು ಆರೋಪಿಸಲಾಗಿದೆ.