ನಿಮ್ಮಷ್ಟು ಕ್ರೂರಿಗಳಲ್ಲ ನಾವು... ಪೈಲಟ್​ ತಾಯಿ ಅಳಲಿನ ಬೆನ್ನಲ್ಲೇ ಟ್ರಂಪ್​ ಮುಖಕ್ಕೆ ಹೊಡೆದಂತೆ ಹೇಳಿದ ಇರಾನ್​ | US-Iran War

ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ಯುದ್ಧ
ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ಯುದ್ಧ
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್‌ನಲ್ಲಿ ಅಮೆರಿಕನ್ ಪೈಲಟ್‌ಗಾಗಿ ಶೋಧ
  • ಅಮೆರಿಕದ ಪೈಲಟ್​ ನಾಪತ್ತೆ ಬೆನ್ನಲ್ಲೇ ತಾಯಿ ಕಣ್ಣೀರು
  • ಟ್ರಂಪ್​ ನಡೆಗೆ ಇರಾನ್ ಖಡಕ್ ವಾರ್ನಿಂಗ್
US-Iran War: ಫೆ.28ರಂದು ಇರಾನ್​ ಶಾಲೆಗಳನ್ನು ಕ್ಷಿಪಣಿಗಳ ಮೂಲಕ ಛಿದ್ರಗೊಳಿಸಿದ ಅಮೆರಿಕ-ಇಸ್ರೇಲ್​, 165ಕ್ಕೂ ಹೆಚ್ಚು ಅಮಾಯಕ ಮಕ್ಕಳನ್ನು ಬಲಿ ಪಡೆಯಿತು. ಇಲ್ಲಿಂದ ಶುರುವಾದ ಭೀಕರ ಯುದ್ಧವು ಇದೀಗ 36ನೇ ದಿನಕ್ಕೆ ಕಾಲಿಟ್ಟಿದೆ. ಅಮೆರಿಕ ಸೇನಾ ಪಡೆಯ ಫೈಟರ್​ ಜೆಟ್​ ಅನ್ನು ಹೊಡೆದುರುಳಿಸಿದ ಇರಾನ್​ಗೆ ನಾಪತ್ತೆಯಾಗಿರುವ ಓರ್ವ ಪೈಲಟ್​ ತಾಯಿ ಕಣ್ಣೀರು ಸದ್ಯ ಕಟುವಾಗಿ ಪ್ರತಿಕ್ರಿಯಿಸುವಂತೆ ಮಾಡಿದೆ.
ಒಂದು ತಿಂಗಳು ಕಳೆದರೂ ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ನಡುವಿನ ದಾಳಿಗಳು ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ದಾಳಿಗೆ ಪ್ರತಿದಾಳಿ, ಏಟಿಗೆ ಎದಿರೇಟು ಎನ್ನುವುದಷ್ಟೇ ಆಗೋಗಿದೆ. ಮತ್ತೊಂದೆಡೆ, ಇರಾನ್ ಅತ್ಯಾಧುನಿಕ ಅಮೇರಿಕನ್ ಎಫ್-15 ಫೈಟರ್ ಜೆಟ್ ಅನ್ನು ಹೊಡೆದುರುಳಿಸುವ ಮೂಲಕ ಯುದ್ಧದ ತಾಪವನ್ನು ಇನ್ನಷ್ಟು ಹೆಚ್ಚಿಸಿದೆ. ಎಫ್-15 ಅಪಘಾತಕ್ಕೀಡಾಗುತ್ತಿದ್ದಂತೆ, ಇಬ್ಬರು ಪೈಲಟ್‌ಗಳು ಕೂಡಲೇ ಜಿಗಿದಿದ್ದಾರೆ. ಅವರಲ್ಲಿ ಒಬ್ಬರನ್ನು ಅಮೇರಿಕನ್ ಪಡೆಗಳು ರಕ್ಷಿಸಿದರೆ, ಇನ್ನೊಬ್ಬರ ಸುಳಿವು ಇನ್ನೂ ಸಿಕ್ಕಿಲ್ಲ.
ಈ ಮಧ್ಯೆ, ಕಾಣೆಯಾದ ಪೈಲಟ್‌ನ ತಾಯಿ ಮಾತನಾಡಿ, "ನಾಪತ್ತೆಯಾಗಿರುವ ಪೈಲಟ್ ನನ್ನ ಮಗ. ಅವನಿಂದ ಇಲ್ಲಿಯವರೆಗೆ ಯಾವುದೇ ಸುದ್ದಿಯನ್ನು ನಾನು ಕೇಳಿಲ್ಲ. ನೀವೆಲ್ಲರೂ ನನ್ನ ಮಗ ಮತ್ತು ಉಳಿದ ಪೈಲಟ್‌ಗಳ ಸುರಕ್ಷತೆ ಬಗ್ಗೆ ದೇವರಲ್ಲಿ ಪ್ರಾರ್ಥಿಸಿ" ಎಂದು ಕೇಳಿಕೊಂಡಿದ್ದಾರೆ. ಅವರ ಭಾವುಕ ಪೋಸ್ಟ್​ ಹರಿದಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಆಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾದಲ್ಲಿರುವ ಇರಾನಿನ ರಾಯಭಾರ ಕಚೇರಿಗಳು, "ನಿಮ್ಮ ಮಗ ಟ್ರಂಪ್​ ಜೊತೆಗೆ ಇರೋದಕ್ಕಿಂತ ಇರಾನ್ ಸೆರೆಯಲ್ಲಿ ಇರುವುದು ಹೆಚ್ಚು ಸುರಕ್ಷಿತ" ಎಂದಿದೆ.
ಅಮೆರಿಕ ರಕ್ಷಣಾ ಪಡೆಗಳು ಅವನನ್ನು ಹುಡುಕುವವರೆಗೂ ಅವನು ಇರಾನ್ ಸೆರೆಯಲ್ಲಿ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸಿ ಎಂದು ಪಾಕಿಸ್ತಾನದಲ್ಲಿರುವ ಇರಾನಿನ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಇನ್ನು ದಕ್ಷಿಣ ಆಫ್ರಿಕಾದಲ್ಲಿರುವ ಇರಾನಿನ ರಾಯಭಾರ ಕಚೇರಿ, ಇರಾನ್ ಕೈದಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತದೆ, ಇರಾನ್ ಬಹಳ ಪ್ರಾಚೀನ ನಾಗರಿಕತೆಯನ್ನು ಹೊಂದಿದೆ ಮತ್ತು ಅಮೆರಿಕದ ಮಿತ್ರ ಇಸ್ರೇಲ್‌ನಂತೆ ಕೈದಿಗಳನ್ನು ಕ್ರೂರವಾಗಿ ಹಿಂಸಿಸುವುದಿಲ್ಲ ಎಂದು ಪೋಸ್ಟ್​ ಮಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net