ಇರಾನ್ -ಇಸ್ರೇಲ್ ಯುದ್ಧ; ಭಾರತದ ತೈಲ ಬಿಕ್ಕಟ್ಟು ತಡೆಯಲು ಮುಂದೆ ಬಂದ ರಷ್ಯಾ; ಭಾರಿ ಪ್ರಮಾಣದಲ್ಲಿ ತೈಲ ಪೂರೈಕೆ | Russia

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಇರಾನ್-ಇಸ್ರೇಲ್ ಮತ್ತು ಅಮೆರಿಕಾ ಯುದ್ಧದ ಹಿನ್ನೆಲೆ ತೈಲ ಸಾಗಾಣಿಕೆ ಮೇಲೆ ಪರಿಣಾಮ ಬೀರಿದ್ದು, ಭಾರತ ಸೇರಿ ಹಲವು ದೇಶಗಳ ಮೇಲೆ ತೈಲ ಬಿಕ್ಕಟ್ಟು ಎದುರಾಗುವ ಮುನ್ಸೂಚನೆ ನಡುವೆಯೂ ರಷ್ಯಾ(Russia) ಬಿಕ್ಕಟ್ಟಿನಿಂದ ಪಾರು ಮಾಡಲು ಮುಂದೆ ಬಂದಿದ್ದು, ಭಾರಿ ಪ್ರಮಾಣದಲ್ಲಿ ತೈಲ ಪೂರೈಕೆ ಸಿದ್ದವಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ಇರಾನ್ ಯುದ್ಧದಿಂದಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಸಾರಿಗೆ ಸಂಪರ್ಕ ಬಂದ್ ಆಗಿದ್ದು, ಇರಾನ್ ಆ ಪ್ರದೇಶವನ್ನು ವಶಪಡಿಸಿಕೊಂಡು ತನ್ನ ಪ್ರದೇಶವೆಂದು ಘೋಷಣೆ ಮಾಡಿದೆ. ಈ ಹಿನ್ನಲೆ ವಿಶೇಷವಾಗಿ ತೈಲ ಸಾಗಣಿಕೆ ಮೇಲೆ ಪರಿಣಾಮ ಬೀರಿದ್ದು, ತೈಲ ಸಾಗಾಣಿಕೆ ನಿಂತು ಹೋಗುವ ಸ್ಥಿತಿ ಎದುರಾಗಿದೆ.
ಭಾರತಕ್ಕೆ ಶೇ. 40ರಷ್ಟು ತೈಲವು ಹಾರ್ಮುಜ್ ಜಲಸಂಧಿ ಮೂಲಕವೇ ಬರುತ್ತದೆ. ಒಂದು ವೇಳೆ ಈ ಮಾರ್ಗದ ಮೂಲಕ ತೈಲ ಸಾಗಣೆಯನ್ನು ನಿಲ್ಲಿಸಿದರೆ, ಭಾರತವು ತೀವ್ರ ತೈಲ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಕೇವಲ 25 ದಿನಗಳವರೆಗೆ ಸಾಕಾಗುವಷ್ಟು ತೈಲವಿದೆ ಎಂದು ವರದಿಗಳು ಉಲ್ಲೇಖಿಸಿವೆ.
ನಿರಂತರ ಯುದ್ದ ಮುಂದುವರೆದ್ರೆ ಭಾರತದಲ್ಲಿ ತೀವ್ರ ತೈಲ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದ್ದು, ಈಗ ರಷ್ಯಾ ಅಂಥಹ ಬಿಕ್ಕಟ್ಟಿನಿಂದ ಪಾರು ಮಾಡಲು ಮುಂದೆ ಬಂದಿದೆ ಎನ್ನಲಾಗಿದೆ. ಭಾರತಕ್ಕೆ 9.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ರಷ್ಯಾ ಒದಗಿಸಲು ಮುಂದೆ ಬಂದಿದೆ. ಈಗಾಗಲೇ ಕಚ್ಚಾ ತೈಲದ ಹಡಗನ್ನು ಕಳುಹಿಸಿದೆ ಎಂದು ವರದಿಗಳು ಹೇಳಿವೆ.
ಈ ಹಿಂದೆ ರಷ್ಯಾ ನಮಗೆ ಕಡಿಮೆ ಬೆಲೆಯಲ್ಲಿ ತೈಲವನ್ನು ಒದಗಿಸುತ್ತಿತ್ತು. ಆದರೆ ಅಮೆರಿಕಾದ ಹಸ್ತಕ್ಷೇಪದಿಂದ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿದೆ. ಕಳೆದ ಜನವರಿಯಲ್ಲಿ ರಷ್ಯಾದಿಂದ ಕೇವಲ 1.1 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾತ್ರ ಆಮದು ಮಾಡಿಕೊಂಡಿದೆ. ಈಗ ಅದು ಮಾರುಕಟ್ಟೆ ಬೆಲೆಯಲ್ಲಿ ತೈಲವನ್ನು ಒದಗಿಸುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net