ಪ್ರಸ್ತುತ ಇರಾನ್‌ನ ಹಲವು ನಗರಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಮಾಹಿತಿ ವಿನಿಮಯಕ್ಕೆ ತಡೆಯೊಡ್ಡಲಾಗಿದೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿಹೋಗಿದ್ದು, ಔಷಧಿಗಳ ಕೊರತೆ ಎದುರಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರತಿಭಟನೆ ಹತ್ತಿಕ್ಕಲು ಸರ್ಕಾರವು 'ಕರ್ಫ್ಯೂ' ಜಾರಿಗೊಳಿಸಿದ್ದರೂ, ಜನರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ,(ಏಜೆನ್ಸೀಸ್).