ಯುದ್ಧಪಿಡಿತ ಇರಾನ್ ಅಮೆರಿಕಕ್ಕೇನೋ ಸೂಕ್ತ ತಿರುಗೇಟು ನೀಡಿದೆ. ಆದರೆ, ಕದನವಿರಾಮದ ಬಳಿಕ ಇರಾನ್ ತನ್ನ ದೇಶದೊಳಗಿನ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ. ಹೊರ್ಮುಜ್ ಬಂದ್ ಮಾಡುವ ಮೂಲಕ ಕಚ್ಚಾ ತೈಲ ಪೂರೈಕೆ ಜಾಲವನ್ನು ಅಸ್ತವ್ಯಸ್ತಗೊಳಿಸಿದ್ದ ಇರಾನ್, ಈಗ ಸ್ವತಃ ಖಾದ್ಯ ತೈಲದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ನಾಲ್ಕು ತಿಂಗಳುಗಳಿಂದ ಇಂಟರ್ನೆಟ್ ಸಂಪರ್ಕ ಸ್ತಬ್ಧವಾಗಿದ್ದು, ವ್ಯಾಪಾರ ವಹಿವಾಟು ನಷ್ಟದಲ್ಲಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗಿದ್ದು, ನಿರುದ್ಯೋಗ ದರ ಹೆಚ್ಚಿದೆ. ದಾಳಿಯ ಆತಂಕ ಇನ್ನೂ ತಗ್ಗಿಲ್ಲ. ಹಾಗಾಗಿ, ಮಹಾನಗರಗಳ ಮಾಲ್, ಮಾರುಕಟ್ಟೆಗಳೆಲ್ಲ ರಾತ್ರಿ 9ಕ್ಕೆ ಬಂದ್ ಆಗುತ್ತಿವೆ. ಯುದ್ಧದಿಂದಾಗಿ ಇರಾನ್ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆ? ಇಲ್ಲಿದೆ ವಿವರ.