ಗೆಲುವಿನ ಮಾತು ಬಿಡಿ, ಹಸಿವಿನ ಲೆಕ್ಕ ನೋಡಿ! ಅಧಿಕೃತ ಅಂಕಿ-ಅಂಶ ಮುಂದಿಟ್ಟು ಟ್ರಂಪ್​ಗೆ ಇರಾನ್ ಸ್ಪೀಕರ್ ಚಾಟಿ | US Iran

ಅಧಿಕೃತ ಅಂಕಿ-ಅಂಶ ಮುಂದಿಟ್ಟು ಟ್ರಂಪ್​ಗೆ ಇರಾನ್ ಸ್ಪೀಕರ್ ಚಾಟಿ | US Iran
ಅಧಿಕೃತ ಅಂಕಿ-ಅಂಶ ಮುಂದಿಟ್ಟು ಟ್ರಂಪ್​ಗೆ ಇರಾನ್ ಸ್ಪೀಕರ್ ಚಾಟಿ | US Iran
Published on

ಪ್ರಮುಖ ಮುಖ್ಯಾಂಶಗಳು

  • ಟ್ರಂಪ್‌ಗೆ ಇರಾನ್ ಸಂಸತ್ ಸ್ಪೀಕರ್ ಘಾಲಿಬಾಫ್ ತಿರುಗೇಟು
  • ಗೆಲುವಿನ ಮಾತು ಬಿಟ್ಟು ಮೊದಲು ಅಮೆರಿಕದ ಹಸಿವಿನ ಲೆಕ್ಕ ನೋಡಿ
  • 4.7 ಕೋಟಿ ಜನರ ಹಸಿವಿನ ಲೆಕ್ಕ ಮುಂದಿಟ್ಟು ಘಾಲಿಬಾಫ್ ಕಿಡಿ
US Iran: ಅಮೆರಿಕದ ಗೆಲುವಿನ ಶ್ರೇಯಸ್ಸು ಮತ್ತು ಆರ್ಥಿಕತೆಯ ಬಡಾಯಿ ಕೊಚ್ಚಿಕೊಳ್ಳುವ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕುರಿತು ಇರಾನ್​ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಖಡಕ್ ತಿರುಗೇಟು ನೀಡಿದ್ದಾರೆ.
ಅಮೆರಿಕದಲ್ಲಿರುವ ಹಸಿವು ಮತ್ತು ಬಡತನದ ಅಧಿಕೃತ ಅಂಕಿ-ಅಂಶಗಳನ್ನು ಮುಂದಿಟ್ಟು, ನಿಮ್ಮ ಮಾತುಗಳು ಎಷ್ಟು ಸುಳ್ಳುಗಳಿಂದ ಕೂಡಿರುತ್ತೆ, ಅಷ್ಟೇ ಸುಳ್ಳು ಈ ಡೇಟಾದಲ್ಲಿ ಇಲ್ಲ. ಸದಾ ಗೆಲುವಿನ ಮಾತಾಡುವ ನೀವು, ಮೊದಲು ಇದನ್ನು ಸರಿಯಾಗಿ ನೋಡಿ ಎಂದು ಡೊನಾಲ್ಡ್ ಟ್ರಂಪ್‌ಗೆ ಟಾಂಗ್ ಕೊಟ್ಟಿದ್ದಾರೆ.

'ಎಕ್ಸ್'​ ಮೂಲಕ ಚಾಟಿ

ತಮ್ಮ ಎಕ್ಸ್ (ಟ್ವಿಟರ್​) ಖಾತೆಯಲ್ಲಿ ಟ್ರಂಪ್ ಅವರ ಹೆಸರಾಂತ 'MAGA' ಘೋಷಣೆಯನ್ನು ಉಲ್ಲೇಖಿಸಿ, ಅಮೆರಿಕವನ್ನು ಮತ್ತೆ ಹಸಿಯುವಂತೆ ಮಾಡಿ. ನೋಡಿ ಇಲ್ಲಿ, ನಿಮ್ಮದೇ ಸರ್ಕಾರದ ವರದಿಗಳನ್ನು ಉಲ್ಲೇಖಿಸಿರುವ ಅಧಿಕೃತ ಅಂಕಿ-ಅಂಶಗಳಿವು. ಅಮೆರಿಕದಲ್ಲಿ ಬಡತನಕ್ಕಿಂತ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಎಷ್ಟಿದೆ ನೀವೇ ನೋಡಿ ಎಂದು ಮುಖಕ್ಕೆ ಹೊಡೆದಂತೆ ಓಪನ್ ಆಗಿ ಪ್ರಶ್ನಿಸಿದ್ದಾರೆ.

ಪ್ರತಿದಿನ 4.7 ಕೋಟಿ ಜನ

ಅಮೆರಿಕದಲ್ಲಿ ಪ್ರತಿನಿತ್ಯ 47 ಮಿಲಿಯನ್ ಅಂದರೆ 4.7 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ನಿಮ್ಮ ದೇಶದ ಪ್ರತಿ 8 ಜನರಲ್ಲಿ ಒಬ್ಬರಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. 1.6 ಕೋಟಿ (16 ಮಿಲಿಯನ್) ಮಕ್ಕಳು ಹಸಿವಿನಿಂದ ನರಳಿ ನರಳಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಅಂಕಿ-ಅಂಶಗಳು ನಿಮ್ಮ ಮಾತುಗಳಷ್ಟು ಸುಳ್ಳೇನಲ್ಲ ಎಂದು ಗಾಲಿಬಾಫ್ ನೇರವಾಗಿ ದಾಳಿ ನಡೆಸಿದ್ದಾರೆ.

ಇರಾನ್‌ಗೆ ಆರ್ಥಿಕ ಪೆಟ್ಟು

ಇನ್ನೊಂದೆಡೆ, ಅಮೆರಿಕ ವಿಧಿಸಲಿರುವ ಕಠಿಣ ನಿರ್ಬಂಧಗಳ ಭೀತಿಯಿಂದ ಇರಾನಿನ ಕರೆನ್ಸಿ ರಿಯಾಲ್ (Rial) ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಸೋಮವಾರ (ಆ.24) ಕಪ್ಪು ಮಾರುಕಟ್ಟೆಯಲ್ಲಿ 1 ಅಮೆರಿಕನ್ ಡಾಲರ್‌ಗೆ 20.2 ಲಕ್ಷ (2.02 ಮಿಲಿಯನ್) ರಿಯಾಲ್ ತಲುಪುವ ಮೂಲಕ ಇರಾನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net