ಇನ್ನೂ 30 ದಿನ... ಹೊರ್ಮುಜ್ ಸಂಪೂರ್ಣ ಕಂಟ್ರೋಲ್ ನಮ್ಮದೇ​: ವೈರಿಗಳಿಗೆ ಇರಾನ್​ ವಿದೇಶಾಂಗ ಸಚಿವ ವಾರ್ನಿಂಗ್​ ​

ಇರಾನ್​ ವಿದೇಶಾಂಗ ಸಚಿವ (ಎಡ), ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ (ಬಲ)
ಇರಾನ್​ ವಿದೇಶಾಂಗ ಸಚಿವ (ಎಡ), ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಹೊರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
  • ಸಂಪೂರ್ಣ ನಿಯಂತ್ರಣ ಇರಾನ್ ಕೈಯಲ್ಲಿದೆ
  • ಇಸ್ರೇಲಿ ದಾಳಿಯಿಂದ ಇರಾನ್​ ಕೆಂಡಾಮಂಡಲ
Hormuz Strait: ಅಮೆರಿಕ ಜತೆಗೆ ಶಾಂತಿ ಒಪ್ಪಂದ ಮಾಡಿಕೊಂಡ ಬಳಿಕ ಸುಮ್ಮನಿದ್ದ ಇರಾನ್​ ಮೇಲೆ ಇದೀಗ ಇಸ್ರೇಲಿ ಮತ್ತು ಅಮೆರಿಕ ನಡೆಸಿದ ದಾಳಿ ನಡೆಸಿರುವುದು ಮತ್ತೆ ಸಂಘರ್ಷವನ್ನು ಸ್ಫೋಟಿಸಿದೆ.
ಅಮೆರಿಕದ ಮಿತ್ರ ರಾಷ್ಟ್ರಗಳ ನಡೆಯಿಂದ ಕೆರಳಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ​ಮುಂದಿನ 30 ದಿನ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದು ಮತ್ತು ಇದರ ಸಂಪೂರ್ಣ ಕಂಟ್ರೋಲ್​ ಇರಾನ್​ನದ್ದೇ ಆಗಿರುತ್ತದೆ ಎಂದು ಇರಾಕಿ ವಿದೇಶಾಂಗ ಸಚಿವ ಫುವಾದ್ ಹುಸೇನ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಈ ಹಿಂದೆ ಹೊರ್ಮುಜ್ ಜಲಮಾರ್ಗದಲ್ಲಿ ಇರಾನ್​ ಹಾಕಿದ್ದ ಅಡೆತಡೆಗಳನ್ನು ತೆಗೆದುಹಾಕಲಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ. ಜಲಸಂಧಿಯ ವಿಚಾರಲ್ಲಿ ಇನ್ಯಾವುದೇ ದೇಶ ಅಥವಾ ಬಾಹ್ಯಶಕ್ತಿಗಳು ಮಧ್ಯಪ್ರವೇಶಿಸಲು ಅಥವಾ ತೊಂದರೆ ಕೊಡಲು ಮುಂದಾದರೆ, ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅರಘ್ಚಿ ಎಚ್ಚರಿಸಿದ್ದಾರೆ.
ಇದೇ ಸಮಯದಲ್ಲಿ, ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಒಪ್ಪಂದದ ನಿಯಮಗಳ ಪ್ರಕಾರ, ಲೆಬನಾನ್ ಸೇರಿ ಎಲ್ಲಾ ಕ್ಷೇತ್ರಗಳಲ್ಲಿಯೂ ದ್ವೇಷ, ದಾಳಿಗಳು ಅಂತ್ಯಗೊಳ್ಳಬೇಕು. ಅತಿ ಮುಖ್ಯವಾಗಿ, ಇಸ್ರೇಲಿ ಅಟ್ಯಾಕ್​ಗಳನ್ನು ತಡೆಯುವ ಸಂಪೂರ್ಣ ಜವಾಬ್ದಾರಿ ಈಗ ಟ್ರಂಪ್​ ರಾಷ್ಟ್ರಕ್ಕಿದೆ ಎಂದು ಒತ್ತಿ ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net