ವೈಟ್​ಹೌಸ್ ಶೂಟಿಂಗ್​ ಕೇಸ್ ಬೆನ್ನಲ್ಲೇ Lego Animation ಬಳಸಿ ಟ್ರಂಪ್​ನ ಕೆಣಕಿದ ಇರಾನ್​​; ಅಹಂಕಾರ ಆಕಾಶದಷ್ಟಿದೆ, ಟೀಕೆ ತಡೆಯೋ ಶಕ್ತಿಯಿಲ್ಲ ಎಂದು ವ್ಯಂಗ್ಯ

 Lego Animation
Lego Animation
Published on

ಪ್ರಮುಖ ಮುಖ್ಯಾಂಶಗಳು

  • ಟ್ರಂಪ್​ನ ಗುರಿಯಾಗಿಸಿಕೊಂಡು ಲೆಗೊ ವಿಡಿಯೋ ರಿಲೀಸ್ ಮಾಡಿದ ಇರಾನ್​
  • ರೇಟಿಂಗ್ಸ್ ತಗ್ಗಿದಾಗ ಹಳೆ ಚಾಳಿ ಬಳಕೆ ಮಾಡ್ತೀರ ಎಂದು ವ್ಯಂಗ್ಯ
  • ಟ್ರಂಪ್​ ನಾಯಕತ್ವ ಮತ್ತು ಹೋಟೆಲ್​ನಲ್ಲಿ ಕಾಣಿಸಿಕೊಂಡ ಭದ್ರತಾ ವೈಪಲ್ಯದ ಬಗ್ಗೆ ಲೇವಡಿ
ಟ್ರಂಪ್​ರ ಸ್ವಭಾವ, ಮನೋಭಾವ, ಆಡಳಿತದ ನೀತಿ ಅಣಕಿಸುವ 'ಲೆಗೊ' ಮಾದರಿಯ 'ಡಿಶ್ ಟ್ರ್ಯಾಕ್'   ಅನಿಮೇಟೆಡ್ ವಿಡಿಯೋವನ್ನು ಇರಾನ್ ಎಕ್ಸ್​​ನಲ್ಲಿ ಹಂಚಿಕೊಂಡಿದೆ.ಈ ವಿಡಿಯೋ  ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಡಿನ್ನರ್​ ಕಾರ್ಯಕ್ರಮದಲ್ಲಿ ಟ್ರಂಪ್​ ಭಾಷಣ ಮಾಡುವ ವೇಳೆ ಗುಂಡಿನ ಸುದ್ದಿ ಕೇಳಿ ಬಂದಿತ್ತು. ಆ ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳು ಬಾಲ್ ರೂಂನಲ್ಲಿ ನೆರೆದಿದ್ದ 2,500 ಮಂದಿ ಟೇಬಲ್​ ಕೆಳೆಗೆ ಅವಿತುಕೊಂಡರು. ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಸೇರಿದಂತೆ ಹಲವು ಗಣ್ಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. 

ಇರಾನ್​ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಹೀಗಿದೆ..

 ಇರಾನ್  ಬೆಂಬಲಿಗರು ಈ ಘಟನೆಯನ್ನು ಆಧರಿಸಿ, ಲೆಗೊ ಬೊಮ್ಮೆಗಳ ಮಾದರಿಯ ಅನಿಮೇಟೆಡ್ ರಾಪ್ ಸಾಂಗ್ ಸಿದ್ಧಪಡಿಸಿದ್ದಾರೆ.  ಇದರಲ್ಲಿ ಟ್ರಂಪ್​ ನಾಯಕತ್ವ ಮತ್ತು ಭದ್ರತೆ ಬಗ್ಗೆ ವ್ಯಂಗ್ಯ ಮಾಡಲಾಗಿದ್ದೆ. ನೋ ಕಾಮಿಡಿಯನ್​ ಎನ್ನುವ ಲೈನ್ಸ್​​ನ್ನು ಇದಕ್ಕೆ ಹಾಕಲಾಗಿದೆ.

ಹಾಡಿನ ಅರ್ಥವೇನು?

ನಿಮ್ಮ ಜನಪ್ರಿಯತೆ ಕುಸಿದಾಗಲೆಲ್ಲಾ ಇಂತಹದ್ದೇ ನಾಟಕಗಳನ್ನು ಮಾಡುತ್ತೀರಿ ಎಂಬ ಸಾಲುಗಳ ಮೂಲಕ  ಡಿನ್ನರ್​​ ಶೂಟೌಟ್​ ಕೇಸ್​ ವ್ಯವಸ್ಥಿತ ಸಂಚು ಎಂದು ಹೇಳಲಾಗಿದೆ. ಪ್ರತಿ ಬಾರಿ ನಿಮ್ಮ ರೇಟಿಂಗ್ಸ್  ಬಿದ್ದು ಹೋದಾಗ ನಿಮ್ಮ ಹಳೆಯ ಚಾಳಿಯನ್ನೇ ಬಳಕೆ ಮಾಡಿಕೊಳ್ಳುತ್ತೀರಿ. ನೀವು "ಸೂಪರ್ ಫ್ರಜೈಲ್"  ಎಂದು ಕರೆಯಲಾಗಿದೆ. ಅಹಂಕಾರ ಆಕಾಶದಷ್ಟಿದೆ, ಆದರೆ ಸಣ್ಣ ಟೀಕೆಯನ್ನೂ ತಡೆದುಕೊಳ್ಳುವ ಶಕ್ತಿಯಿಲ್ಲ ಎಂದು ವ್ಯಂಗ್ಯವಾಡಲಾಗಿದೆ.
ಅಮೆರಿಕದ ಮಾಧ್ಯಮಗಳನ್ನು ನೀವು ನಿಯಂತ್ರಿಸಬಹುದು, ಆದರೆ ಇರಾನ್ ಮೇಲೆ ನಿಮ್ಮ ಆಟ ನಡೆಯದು ಎಂಬ ಎಚ್ಚರಿಕೆಯ ಸಂದೇಶವನ್ನೂ ಈ ಹಾಡಿನಲ್ಲಿ ನೀಡಲಾಗಿದೆ. ಟ್ರಂಪ್ ಅವರ ಕಟ್ಟಾ ಬೆಂಬಲಿಗರಾದ 'MAGA' ಗುಂಪು ಕೂಡ ಈಗ ವಾಸ್ತವವನ್ನು ಅರಿಯುತ್ತಿದೆ ಮತ್ತು ದೇಶ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂದು ವಿಡಿಯೋದಲ್ಲಿ ಪ್ರತಿಪಾದಿಸಲಾಗಿದೆ.

'ಸ್ಟೇಜ್ಡ್ ಡ್ರಾಮಾ' ಆರೋಪ

ಈ ವಿಡಿಯೋದಲ್ಲಿ 'ಎಂಪ್ಟಿ ಪ್ಲೇಟ್ಸ್' ಮತ್ತು 'ರಶ್ಡ್ ಎಕ್ಸಿಟ್'ಎಂಬ ಪದಗಳನ್ನು ಬಳಸಲಾಗಿದೆ. ಅಂದರೆ, ಅಂದು ನಡೆದ ಘಟನೆ ಕೇವಲ ನಾಟಕ, ಅಲ್ಲಿ ಅಂತಹ ಗಂಭೀರ ಪರಿಸ್ಥಿತಿ ಇರಲಿಲ್ಲ ಎಂಬುದು ಇರಾನ್ ಮೂಲದ ಸೃಷ್ಟಿಕರ್ತರ ವಾದ. "ನೀವು ಡಿನ್ನರ್ ಅನ್ನು ನಿಯಂತ್ರಿಸಬಹುದು, ಆದರೆ ನೀವೊಬ್ಬ ಸೋತ ವ್ಯಕ್ತಿ" ಎಂಬ ಕಟು ಸಾಲುಗಳು ಈ ರಾಪ್‌ನಲ್ಲಿವೆ.

ಹಿನ್ನೆಲೆ ಮತ್ತು ಯುಟ್ಯೂಬ್ ನಿಷೇಧ

ಇರಾನ್ ಈ ರೀತಿಯ ಪ್ರಚಾರದ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಷ್ಟೇ ಯುಟ್ಯೂಬ್ 'ಎಕ್ಸ್‌ಪ್ಲೋಸಿವ್ ಮೀಡಿಯಾ' ಎಂಬ ಇರಾನ್ ಪರ ಗುಂಪನ್ನು ನಿಷೇಧಿಸಿತ್ತು. ಈ ಗುಂಪು ಸ್ವತಂತ್ರ ಎಂದು ಹೇಳಿಕೊಂಡರೂ, ಇರಾನ್ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬ ಶಂಕೆಯಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net