ವಾಷಿಂಗ್ಟನ್: ಫೆ.28ರಂದು ಇಸ್ರೇಲ್ ಜತೆಗೂಡಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಅಮೆರಿಕ, 169ಕ್ಕೂ ಹೆಚ್ಚು ಅಮಾಯಕ ಮಕ್ಕಳನ್ನು ಬಲಿಪಡೆದಿದ್ದಲ್ಲದೇ, ಇರಾನಿನ ಸುಪ್ರೀಂ ನಾಯಕ ಅಯೊತಲ್ಲಾ ಖಮೇನಿ ಅವರನ್ನು ಹತ್ಯೆಗೈದಿತು. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸುತ್ತಿರುವ ಇರಾನ್, ತಮ್ಮ ಸಂಪೂರ್ಣ ಅಸ್ತ್ರವನ್ನೆಲ್ಲ ಬಳಸಿಕೊಂಡು ಅಮೆರಿಕಕ್ಕೆ ತಕ್ಕ ಪೈಪೋಟಿ ನೀಡುತ್ತಿದೆ. ಇಲ್ಲಿಯವರೆಗೂ ಪರಸ್ಪರ ದಾಳಿ ನಡೆಸುತ್ತಲೇ ಬಂದಿರುವ ಎರಡೂ ರಾಷ್ಟ್ರಗಳು, ಯುದ್ಧ ನಿಲ್ಲಿಸುವ ಮಾತೇ ಇಲ್ಲ ಎಂಬ ಮುನ್ಸೂಚನೆಯನ್ನು ನೀಡಿವೆ.