ಇರಾನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿರುವಂತೆ, ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಅವರು ಕಾರ್ಯಾಚರಣಾ ಘಟಕಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. "ಶತ್ರುಗಳ ಚಲನವಲನವನ್ನು ಕೇವಲ ನಿಖರತೆಯಿಂದ ಮಾತ್ರವಲ್ಲ, 'ತೀವ್ರ ಅಪನಂಬಿಕೆ'ಯಿಂದ (Utmost Pessimism) ಗಮನಿಸಿ. ಅವರು ಶಾಂತಿಯ ಮಾತನಾಡಿದರೂ ಅದರ ಹಿಂದೆ ಸಂಚಿರಬಹುದು. ಹಾಗಾಗಿ, ಯಾವುದೇ ರೀತಿಯ ಸನ್ನಿವೇಶ ಎದುರಾದರೂ ತಕ್ಕ ಪ್ರತ್ಯುತ್ತರ ನೀಡಲು ನಮ್ಮ ಪಡೆಗಳು ಸಜ್ಜಾಗಿರಬೇಕು" ಎಂದು ಅವರು ಗುಡುಗಿದ್ದಾರೆ.