IPL Auction: ಅತ್ಯಧಿಕ ಮೊತ್ತಕ್ಕೆ ಸೋಲ್ಡ್ ಆದ ಟಾಪ್ 5 ಆಟಗಾರರು ಇವರೇ ನೋಡಿ
IPL Auction
Published on:
Copied
Follow Us
ಅಬುಧಾಬಿ:2026ರ ಐಪಿಎಲ್ ಮಿನಿ-ಹರಾಜು(IPL Auction) ಅಬುಧಾಬಿಯಲ್ಲಿ ನಡೆಯುತ್ತಿದ್ದು, ಮೂರು ಬಾರಿ ವಿಜೇತರಾದ ಕೆಕೆಆರ್ 25.20 ಕೋಟಿ ನೀಡುವ ಮೂಲಕ ಕ್ಯಾಮರೂನ್ ಗ್ರೀನ್ ಮತ್ತು ಶ್ರೀಲಂಕಾದ ಮಥೀಷ ಪತಿರಾಣ 18 ಕೋಟಿಗೆ ಖರೀದಿಸಿದೆ. ಅಲ್ಲದೆ, ಸಿಎಸ್‌ಕೆಯು ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ತಲಾ 14.20 ಕೋಟಿಗೆ ಬಿಡ್ನಲ್ಲಿ ತಗೆದುಕೊಂಡಿದೆ.
1. ಕ್ಯಾಮೆರಾನ್ ಗ್ರೀನ್- 25.20 ಕೋಟಿ ರೂ.(ಕೆಕೆಆರ್)
ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ 25.20 ಕೋಟಿಗೆ ಖರೀದಿಸಿದೆ. ಇದು IPL ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರನ ಖರೀದಿಯಾಗಿದೆ. ಇದಕ್ಕೂ ಮೊದಲು ಮಿಚೆಲ್ ಸ್ಟಾರ್ಕ್‌ರನ್ನು 24.75 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿದ್ದರು.
2. ಮಥಿಷಾ ಪತಿರಣಾ-18 ಕೋಟಿ ರೂ.(ಕೆಕೆಆರ್)
ಶ್ರೀಲಂಕಾದ ಸ್ಲಿಂಗ್ ಆಕ್ಷನ್ ಪೇಸರ್ ಮಥೀಶಾ ಪತಿರಣಾರನ್ನು ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(KKR) ತಂಡ 18 ಕೋಟಿಗೆ ಖರೀದಿಸಿದೆ. ಅಲ್ಲದೆ, ಇದು IPL ಇತಿಹಾಸದಲ್ಲಿ ಅತ್ಯಂತ ದುಬಾರಿ ಶ್ರೀಲಂಕಾ ಆಟಗಾರನ ಖರೀದಿ ಹಿಂದಿನ ರೆಕಾರ್ಡ್ ಮುರಿದಿದೆ.
IPLನಲ್ಲಿ CSKಗಾಗಿ 32 ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, 2023ರಲ್ಲಿ CSK ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಉತ್ತರ ಪ್ರದೇಶದ 20 ವರ್ಷದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಪ್ರಶಾಂತ್ ವೀರ್ರನ್ನು ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ 14.20 ಕೋಟಿ ರೂಪಾಯಿಗಳ ದಾಖಲೆ ಬೆಲೆಗೆ ಖರೀದಿಸಿದೆ. ಇದು IPL ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರನ ಖರೀದಿ ಹಿಂದಿನ ರೆಕಾರ್ಡ್ ಅವೇಶ್ ಖಾನ್‌ನ 10 ಕೋಟಿ ದಾಖಲೆಯನ್ನು ಮುರಿದಿದೆ.
4. ಕಾರ್ತಿಕ್ ಶರ್ಮಾ-14.2 ಕೋಟಿ ರೂ.(ಸಿಎಸ್ಕೆ)
ಕಾರ್ತಿಕ್ ಶರ್ಮಾ ರಾಜಸ್ಥಾನದ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದು, ಐಪಿಎಲ್ 2026ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಜೊತೆ ₹14.2 ಕೋಟಿಗೆ ಸಹಿ ಹಾಕಿದ್ದಾರೆ. ಅಲ್ಲದೆ, CSK ಭಾರತೀಯ ಪ್ರತಿಭೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ.
5. ಔಕಿಬ್ ನಬೀ-8.40 ಕೋಟಿ ರೂ.(ಡಿಸಿ)
ಅಫ್ಘಾನಿಸ್ತಾನದ ಆಲ್‌ರೌಂಡರ್ ಔಕಿಬ್ ನಬೀರನ್ನು IPL 2026 ಮಿನಿ ಹರಾಜಿನಲ್ಲಿ ದೆಹಲಿ ಕ್ಯಾಪಿಟಲ್ಸ್ (DC) ತಂಡ 8.40 ಕೋಟಿಗೆ ಖರೀದಿಸಿದೆ. ಅಲ್ಲದೆ, ಇವರು ರೈಟ್-ಹ್ಯಾಂಡ್ ಆಫ್-ಸ್ಪಿನ್ನರ್ ಮತ್ತು ಲೋಯರ್ ಆರ್ಡರ್ ಪವರ್ ಹಿಟ್ಟರ್ ಆಗಿದ್ದು, T20ಯಲ್ಲಿ ಒಳ್ಳೆಯ ಅನುಭವಿ ಆಟಗಾರರಾಗಿದ್ದಾರೆ,(ಏಜೆನ್ಸೀಸ್)