ಇರಾನ್​ನಲ್ಲಿ ತೀವ್ರಗೊಂಡ ಖಮೇನಿ ವಿರೋಧಿ ಪ್ರತಿಭಟನೆ: ಇಂಟರ್ನೆಟ್​ ಸ್ಥಗಿತ, ಫೋನ್​ ಸಂಪರ್ಕ ಕಡಿತ! Anti Khamenei Protests

ಇರಾನ್​ನಲ್ಲಿ ತೀವ್ರಗೊಂಡ ಖಮೇನಿ ವಿರೋಧಿ ಪ್ರತಿಭಟನೆ
ಇರಾನ್​ನಲ್ಲಿ ತೀವ್ರಗೊಂಡ ಖಮೇನಿ ವಿರೋಧಿ ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್​ನಲ್ಲಿ ಮತ್ತೆ ಪ್ರತಿಭಟನೆಗಳು ಆರಂಭವಾಗಿವೆ
  • ಇಂಟರ್ನೆಟ್​ ಹಾಗೂ ಟೆಲಿಫೋನ್​ ಸಂಪರ್ಕವನ್ನು ಕಡಿತಗೊಳಿಸಲಾಗಿದೆ
  • ಇರಾನ್​ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆಗಳು ದುಬಾರಿಯಾಗಿವೆ
  • ರೆಜಾ ಪಹ್ಲವಿ ಕರೆಗೆ ಸಾವಿರಾರು ಪ್ರತಿಭಟನಾಕಾರರು ಒಮ್ಮೆಲೆ ಬೀದಿಗೆ ಇಳಿದರು
ಟೆಹ್ರಾನ್​: ಇರಾನ್​ನಲ್ಲಿ ಮತ್ತೆ ಪ್ರತಿಭಟನೆಗಳು ( Anti-Khamenei Protests ) ಆರಂಭವಾಗಿವೆ. ಇರಾನ್‌ನ ಕೊನೆಯ ಶಾಹ್ ಮೊಹಮ್ಮದ್ ರೆಜಾ ಪಹ್ಲವಿ ಅವರ ಪುತ್ರ ಹಾಗೂ ಗಡಿಪಾರಾಗಿರುವ ಕ್ರೌನ್​ ಪ್ರಿನ್ಸ್​ ರೆಜಾ ಪಹ್ಲವಿ ಕರೆಗೆ ಓಗೊಟ್ಟು ಸಾವಿರಾರು ಜನರು ಗುರುವಾರ (ಜ.08) ತಡರಾತ್ರಿ ಟೆಹ್ರಾನ್​ನ ಬೀದಿ-ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಪರಿಣಾಮವನ್ನು ತಡೆಯಲು ಇರಾನ್​ ಬಹುತೇಕ ಭಾಗಗಳಲ್ಲಿ ಇಂಟರ್ನೆಟ್​ ಹಾಗೂ ಟೆಲಿಫೋನ್​ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಈ ಪ್ರತಿಭಟನೆಯಲ್ಲಿ "ಜಾವಿದ್ ಶಾಹ್" (ಲಾಂಗ್ ಲೈವ್ ದಿ ಕಿಂಗ್), "ಪಹ್ಲವಿ ವಾಪಸ್ ಬರುತ್ತಾರೆ" ಎಂಬ ಘೋಷಣೆ ಜತೆಗೆ ಸರ್ಕಾರ ವಿರೋಧಿ ಘೋಷಣೆಗಳೂ ಕೇಳಿಬಂದವು. 
ಪ್ರಸ್ತುತ ಇರಾನ್​ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆಗಳು ದುಬಾರಿಯಾಗಿವೆ. ಉದ್ಯೋಗ ಕೊರತೆ ಕಾಡುತ್ತಿದ್ದು, ಜೀವನ ನಿರ್ವಹಣೆ ವೆಚ್ಚ ಅಧಿಕವಾಗಿದೆ. ಇದರಿಂದ ಬೇಸತ್ತಿರುವ ಜನರು ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ರೆಜಾ ಪಹ್ಲವಿ ಕರೆಗೆ ಸಾವಿರಾರು ಪ್ರತಿಭಟನಾಕಾರರು ಒಮ್ಮೆಲೆ ಬೀದಿಗೆ ಇಳಿದರು. ಇರಾನ್​ನ ಸುಪ್ರೀಂ ನಾಯಕ ಹಾಗೂ ಅಧ್ಯಕ್ಷ ಅಲಿ ಹೊಸೇನಿ ಖಮೇನಿ ಆಡಳಿತ ಬದಲಾವಣೆಗೆ ಭಾರೀ ಆಗ್ರಹಗಳು ಕೇಳಿಬರುತ್ತಿವೆ. 
ಜನವರಿ 8ರ ಸಂಜೆ ಪ್ರತಿಭಟನೆಗಳು ತೀವ್ರಗೊಂಡ ಬೆನ್ನಲ್ಲೇ ಇರಾನ್ ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೆ, ಫೋನ್​ ಸಂಪರ್ಕವನ್ನು ಕಡಿಗೊಳಿಸಿದೆ. ಪ್ರತಿಭಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಹೊರಗೆ ಹೋಗದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. 
ಹಲವಾರು ಪ್ರದೇಶಗಳಲ್ಲಿ ವಾಯುಪಡೆಯವರಿಗೆ ಸೂಚನೆಗಳು ನೀಡಲಾಗಿದೆ ಮತ್ತು ತಬ್ರಿಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.​ 
ಇರಾನ್‌ನಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಖಮೇನಿ ಆಡಳಿತವನ್ನು ಪಹ್ಲವಿ ಟ್ವೀಟ್‌ನಲ್ಲಿ ಟೀಕಿಸಿದರು. ಇಂದು ರಾತ್ರಿ ಲಕ್ಷಾಂತರ ಇರಾನಿಯನ್ನರು ತಮ್ಮ ಸ್ವಾತಂತ್ರ್ಯಕ್ಕಾಗಿ ಬೀದಿಗೆ ಇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಆಡಳಿತವು ಎಲ್ಲಾ ಸಂವಹನ ಮಾರ್ಗಗಳನ್ನು ಕಡಿತಗೊಳಿಸಿದೆ. ಅದು ಇಂಟರ್ನೆಟ್ ಸಹ ಸ್ಥಗಿತಗೊಳಿಸಿದೆ. ದೂರವಾಣಿಗಳ ಸಂಪರ್ಕ ಕಡಿತಗೊಳಿಸಿದೆ. ಅಲ್ಲದೆ, ಉಪಗ್ರಹಗಳ ಸಿಗ್ನಲ್​ಗಳನ್ನು ಸ್ಥಗಿತಗೊಳಿಸಲು ಸಹ ಪ್ರಯತ್ನಿಸಿರಬಹುದು ಎಂದು ಪಹ್ಲವಿ ಟೀಕಿಸಿದ್ದಾರೆ. 
ಪ್ರತಿಭಟನೆಗಳು ಇನ್ನೂ ಮುಂದುವರಿದಿವೆಯೇ ಎಂಬುದು ಇಂಟರ್ನೆಟ್​ ಕಡಿತಗೊಳಿಸಿರುವುದರಿಂದ ತಿಳಿದುಬಂದಿದೆ. ಆದರೆ, ರೆಜಾ ಪಹ್ಲವಿ ಅವರು ಪ್ರತಿಭಟನೆ ಮುಂದುವರಿಸಲು ಜನರಿಗೆ ಕರೆ ನೀಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಟ್ರಂಪ್ ಸೇರಿದಂತೆ ಕೆಲವರು ಪ್ರತಿಭಟನಾಕಾರರನ್ನು ಬೆಂಬಲಿಸಿದ್ದಾರೆ. ಸದ್ಯ ಖಮೇನಿ ಆಡಳಿತದ ವಿರುದ್ಧ ಅಲ್ಲಿನ ಜನರು ಸಿಡಿದ್ದೆದ್ದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net