ಭಾರತದ ವಿದೇಶಾಂಗ ನೀತಿ ವಿಫಲವಾಗಿದೆ: ಎಲ್ಲಿದ್ದಾನೆ ಆ ವಿಶ್ವಗುರು? ಕೇಂದ್ರ ಸರ್ಕಾರದ ವಿರುದ್ಧ ಜೈರಾಮ್​ ರಮೇಶ್​ ವಾಗ್ದಾಳಿ! Jairam Ramesh on Foreign Policy

ಭಾರತದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ: ಕಾಂಗ್ರೆಸ್​ ನಾಯಕ
ಭಾರತದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ: ಕಾಂಗ್ರೆಸ್​ ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಇಸ್ಲಾಮಾಬಾದ್​ನಲ್ಲಿ ಅಮೆರಿಕ-ಇರಾನ್​ ಶಾಂತಿ ಸಭೆ
  • ಭಾರತದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ: ಕಾಂಗ್ರೆಸ್​ ನಾಯಕ
  • ಎಲ್ಲಿದ್ದಾನೆ ಆ ವಿಶ್ವಗುರು? ಎಂದ ಜೈರಾಮ್​ ರಮೇಶ್​
ನವದೆಹಲಿ:  ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಶಾಂತಿ ಮಾತುಕತೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕುರಿತು ವ್ಯಂಗ್ಯವಾಡಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​, ಇದು ಭಾರತದ ವಿದೇಶಾಂಗ ನೀತಿಯ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದೆ.

ಎಲ್ಲಿದ್ದಾನೆ ವಿಶ್ವಗುರು?

ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​ನಲ್ಲಿ, ಕಾಂಗ್ರೆಸ್​ ಪಕ್ಷದ ಸಂಸದ ಜೈರಾಮ್​ ರಮೇಶ್​ (Jairam Ramesh on Foreign Policy), ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಭೆ ಇಂದು (ಏ.11) ಆರಂಭವಾಗಲಿದೆ. ಭಾರತ ಸೇರಿದಂತೆ ಇಡೀ ಜಗತ್ತು, ಇದು ಎರಡೂ ದೇಶಗಳ ನಡುವಿನ ಶಾಶ್ವತ ಶಾಂತಿ ಪ್ರಕ್ರಿಯೆಯ ಆರಂಭವನ್ನು ಗುರುತಿಸುತ್ತದೆ ಎಂದು ಹೇಳಲಾಗುತ್ತಿದೆ.
ಅಂದರೆ ಭಾರತದ ವಿದೇಶಾಂಗ ನೀತಿ ವಿಫಲವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ತನ್ನನ್ನು ತಾನೇ ವಿಶ್ವಗುರು ಎಂದು ಕರೆದುಕೊಳ್ಳುವ ನರೇಂದ್ರ ಮೋದಿ, ವಿಶ್ವಶಾಂತಿಗಾಗಿ ಏನು ಮಾಡಿದ್ದಾರೆಂದು ತಿಳಿಸಲಿ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. 

ಇಸ್ಲಾಮಾಬಾದ್​ನಲ್ಲಿ ನಡೆಯುತ್ತಿರುವ ಶಾಂತಿ ಸಭೆ

ಇರಾನ್​ ಮೇಲೆ ಅಮೆರಿಕ ಮತ್ತು ಇಸ್ರೇಲ್​ ದಾಳಿ ಪ್ರಾರಂಭಿಸಿ 40 ದಿನ ಕಳೆದ ನಂತರ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, 14 ದಿನಗಳ ಕದನ ವಿರಾಮವನ್ನು ಘೋಷಿಸಿದರು. ಈ ಕದನ ವಿರಾಮವನ್ನು ಇರಾನ್​ ಒಪ್ಪಿಕೊಳ್ಳುವ ಮೊದಲು ತಮ್ಮ 10 ಷರತ್ತುಗಳನ್ನು ಮೊದಲು ಒಪ್ಪಿಕೊಳ್ಳಬೇಕು, ನಂತರ ಶಾಂತಿ ಮಾತುಕತೆ ನಡೆಸುವ ಎಂದು ಇರಾನ್​ ಹೇಳಿದೆ. 
ಅದರೆ ಕದನ ವಿರಾಮದ ಹೊರತಾಗಿ ಕೂಡ ಇಸ್ರೇಲ್​ ಇರಾನಿನ ಮಿತ್ರ ದೇಶ ಲೆಬನಾನ್​ ಮೇಲೆ ವೈಮಾನಿಕ ದಾಳಿ ನಡೆಸಿ, ಸುಮಾರು 250 ಜನರ ಸಾವಿಗೆ ಕಾರಣವಾಗಿದೆ. ಈಗ ಇರಾನಿನ ಷರತ್ತು ಮತ್ತು ಶಾಶ್ವತ ಶಾಂತಿ ಸ್ಥಾಪನಗೆಗಾಗಿ ಅಮೆರಿಕ ಮತ್ತು ಇರಾನಿನ ಶಾಂತಿ ಸ್ಥಾಪನಾ ನಿಯೋಗ ಪಾಕಿಸ್ತಾನದ ಇಸ್ಲಾಮಾಬಾದ್​ನ್ನು ತಲುಪಿದೆ.

ಒಪ್ಪಂದ ಸಾಧ್ಯವಾಗದಿದ್ದರೆ ಇರಾನ್​ ಉಡೀಸ್: ಟ್ರಂಪ್​!

ಒಂದು ಕಡೆ ಶಾಂತಿ ಮಂತ್ರ ಬೋಧಿಸುತ್ತಿರುವ ಅಮೆರಿಕಾ ಇನ್ನೊಂದು ಕಡೆ ತನ್ನ ನೈಕಾಪಡೆಯನ್ನು ಹೊರ್ಮುಜ್ ಜಲಸಂಧಿಯತ್ತ ರವಾನಿಸುತ್ತಿದೆ ಎಂದು ತಿಳಿದು ಬಂದಿದೆ. ಶಾಂತಿ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಈ ಮಾತುಕತೆ ಮುರಿದು ಬಿದ್ದರೆ ನಮ್ಮ ಸೈನ್ಯ ಸಶಕ್ತವಾಗಿದೆ, ಇರಾನ್​ನನ್ನು ಹೇಗೆ ಮಣಿಸಬೇಕೆಂದು ನಮಗೆ ತಿಳಿದಿದೆ ಎಂದು ಬೆದರಿಕೆ ಹಾಕಿದ್ದಾರೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net