ಉಜ್ವಲ ಭವಿಷ್ಯದ ಆಸೆ ಹೊತ್ತು ಜರ್ಮನಿಗೆ ಹೋಗಿದ್ದ ಮೂವರು ಭಾರತೀಯರ ಭೀಕರ ಸಾವು: ಕೊಲೆ ಶಂಕೆ! Indians Killed

ಕೊಲ್ಲಂ ಜಿಲ್ಲೆಯ ಚೆಮ್ಮಕ್ಕಡ್ ಮೂಲದ ಅಂಜಲಿ ಶೀಲಾ ಜಾಯ್ (25), ಇಡುಕ್ಕಿ ಜಿಲ್ಲೆಯ ಕತ್ತಪ್ಪನ ಮೂಲದ ನೋವಾ ಸಾಬು (25) ಮತ್ತು ಕಾಲಡಿ ಮೂಲದ ಸ್ವಿನ್ ಜಾನಿ (26) ಮೃತ ದುರ್ದೈವಿಗಳು.
Indians Killed
ಜರ್ಮನಿಯಲ್ಲಿ ಮೂವರು ಭಾರತೀಯರ ಸಾವು
Published on: 

ಬರ್ಲಿನ್​: ಜರ್ಮನಿಯಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ಮೂವರು ಮಲಯಾಳಿಗಳು (ಕೇರಳದವರು) ದುರಂತ ಸಾವಿಗೀಡಾಗಿದ್ದಾರೆ. ಜರ್ಮನಿಯ ಬೋಚುಮ್ ನಗರದಲ್ಲಿ ನಡೆದ ಭೀಕರ ಅಗ್ನಿ ದುರಂತ ಕೇವಲ ಆಕಸ್ಮಿಕ ಅಪಘಾತವಲ್ಲ, ಬದಲಿಗೆ ಒಬ್ಬ ಕಿಡಿಗೇಡಿಯಿಂದ ನಡೆದ ಪೂರ್ವಯೋಜಿತ ನರಹತ್ಯೆ ( Indians Killed ) ಎಂದು ಪೊಲೀಸರು ಶಂಕಿಸಿದ್ದಾರೆ.

ಕೊಲ್ಲಂ ಜಿಲ್ಲೆಯ ಚೆಮ್ಮಕ್ಕಡ್ ಮೂಲದ ಅಂಜಲಿ ಶೀಲಾ ಜಾಯ್ (25), ಇಡುಕ್ಕಿ ಜಿಲ್ಲೆಯ ಕತ್ತಪ್ಪನ ಮೂಲದ ನೋವಾ ಸಾಬು (25) ಮತ್ತು ಕಾಲಡಿ ಮೂಲದ ಸ್ವಿನ್ ಜಾನಿ (26) ಮೃತ ದುರ್ದೈವಿಗಳು. ಈ ಘಟನೆಗೆ ಸಂಬಂಧಿಸಿದಂತೆ ಅದೇ ಕಟ್ಟಡದಲ್ಲಿ ವಾಸವಿದ್ದ 41 ವರ್ಷದ ರೊಮೇನಿಯಾ ದೇಶದ ಪ್ರಜೆಯನ್ನು ಜರ್ಮನ್ ಪೊಲೀಸರು ಕೊಲೆ ಆರೋಪದ ಮೇಲೆ ಬಂಧಿಸಿದ್ದು, ಆತನೇ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Also Read
ವೀವ್ಸ್​ಗಾಗಿ ಇದೆಂಥಾ ಹುಚ್ಚಾಟ? ನಾಯಿ ಬೌಲ್​ಗೆ ನೀರು ಸುರಿದು ಪತ್ನಿಯೊಂದಿಗೆ ಅಸಭ್ಯ ವರ್ತನೆ, ನೆಟ್ಟಿಗರ ಆಕ್ರೋಶ! YouTuber
Indians Killed

ಮಂಗಳವಾರ ಬೆಳಗಿನ ಜಾವ ಸುಮಾರು 4:15 ರ ಸುಮಾರಿಗೆ ಬೋಮ್ ಹಫ್‌ಸ್ಟೆಡೆ ಜಿಲ್ಲೆಯ ಪೋಸ್ಟ್‌ಸ್ಟ್ರಾಸ್‌ನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ನೆಲಮಹಡಿಯಲ್ಲಿರುವ ಹಜಾರದಲ್ಲಿ ಇರಿಸಲಾಗಿದ್ದ ಮಕ್ಕಳ ಸ್ಟ್ರೋಲರ್‌ಗಳಿಗೆ (ಗಾಲಿ ಕುರ್ಚಿಗಳು) ಕಿಡಿಗೇಡಿ ಬೆಂಕಿ ಹಚ್ಚಿದ್ದು, ಬೆಂಕಿಯು ಕಟ್ಟಡದ ಮರದ ಮೆಟ್ಟಿಲುಗಳಿಗೆ ವೇಗವಾಗಿ ಹರಡಿಕೊಂಡು ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಕಾರಣನಾದ 41 ವರ್ಷದ ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ಬೆಂಕಿಯ ಅನಾಹುತದಲ್ಲಿ ಗಾಯಗೊಂಡಿರುವ ಐದು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿವೃತ್ತ ಎಸ್‌ಐ ಸಾಬು ಅವರ ಪುತ್ರಿಯಾಗಿರುವ ನೋವಾ ಸಾಬು, ಜುಲೈ 3 ರಂದಷ್ಟೇ ಜರ್ಮನಿಗೆ ತೆರಳಿದ್ದರು ಮತ್ತು ಅಲ್ಲಿ ಅರೆಕಾಲಿಕ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಕಾಲಡಿ ಮೂಲದಸ್ವಿನ್ ಜಾನಿ ಅವರು ಉನ್ನತ ವ್ಯಾಸಂಗಕ್ಕಾಗಿ ಕೇವಲ ಎರಡು ವಾರಗಳ ಹಿಂದಷ್ಟೇ ಜರ್ಮನಿಗೆ ಹೋಗಿದ್ದರು.

Also Read
ಒಂದೇ ದೇಹ ಎರಡು ತಲೆ: ಅಪರೂಪದ ಮಗುವಿಗೆ ಜನ್ಮ ನೀಡಿದ ಒಡಿಶಾ ಮಹಿಳೆ, ಮುಂದಿದೆ ಈ ಸವಾಲು? Two Headed Baby
Indians Killed

ವಿದೇಶದಲ್ಲಿ ಉಜ್ವಲ ಭವಿಷ್ಯವನ್ನು ಕಾಣಲು ಕನಸುಕೊಂಡು ಹೋದ ಯುವಕ-ಯುವತಿಯರ ಈ ಅನಿರೀಕ್ಷಿತ ಅಂತ್ಯವು ಅವರ ಕುಟುಂಬಗಳಲ್ಲಿ ಮತ್ತು ಆಪ್ತರಲ್ಲಿ ತೀವ್ರ ಶೋಕಮೂಡಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net