ಆರಂಭಿಕ ಹಂತದ ಇಂಜಿನಿಯರ್‌ಗಳಿಗೆ ಈ ನಿಯಮದಿಂದ ಸದ್ಯ ಬಾಗಿಲು ಬಂದ್ ಆದಂತಿದೆ. ಪ್ರಸ್ತುತ, ಹೆಚ್-1ಬಿ ಲಾಟರಿ ವ್ಯವಸ್ಥೆಯು ಈಗಾಗಲೇ ಹೆಚ್ಚಿನ ವೇತನ ಮತ್ತು ಅನುಭವ ಇರುವವರಿಗೆ ಆದ್ಯತೆ ನೀಡುತ್ತಿದೆ. ಇದರೊಟ್ಟಿಗೆ, ಲಕ್ಷ ಡಾಲರ್ ಶುಲ್ಕ ಬಿದ್ದರೆ, ಹೊಸಬರನ್ನು ನೇಮಿಸಿಕೊಳ್ಳಲು ಅಮೆರಿಕನ್ ಕಂಪನಿಗಳು ಮುಂದೆ ಬಂದರೂ, ಬರುವವರ ಸಂಖ್ಯೆ ಕುಂಠಿತಗೊಳ್ಳಲಿದೆ.